More

    ಸಂಸ್ಕಾರದ ಅಭಾವ ವೃದ್ಧಾಶ್ರಮ ಹೆಚ್ಚಳ -ವೀರೇಶ್ ಬಿರಾದಾರ್ ವಿಷಾದ -ಶಿವಾನುಭವ ಸಂಪದ ಕಾರ್ಯಕ್ರಮ

    ದಾವಣಗೆರೆ: ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ವಿನಾಯಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ವೀರೇಶ್ ಬಿರಾದಾರ್ ವಿಷಾದಿಸಿದರು.
    ನಗರದ ದೇವರಾಜ ಅರಸು ಬಡಾವಣೆಯ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಏರ್ಪಡಿಸಿದ್ದ 265ನೇ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಪಾಲಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು. ಜೀವನಮೌಲ್ಯಗಳನ್ನೂ ಬಿತ್ತಬೇಕು. ಹಣ ಸಂಪಾದನೆಗಾಗಿ ಮಕ್ಕಳು ವಿದೇಶದಲ್ಲಿದ್ದರೆ ಪಾಲಕರು ವೃದ್ಧಾಶ್ರಮದಲ್ಲಿ ಕಾಲ ಕಳೆಯಬೇಕೆ ಎಂದು ಪ್ರಶ್ನಿಸಿದರು.
    ಸಂಸ್ಕಾರದಿಂದ ಜಗತ್ತನ್ನೇ ಗೆಲ್ಲಬಹುದು. ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಬೇಕು. ಮಕ್ಕಳೂ ಸಹ ಜೀವನದಲ್ಲಿ ಸದ್ಗುಣ ಅಳವಡಿಸಿಕೊಂಡು ಹೆತ್ತವರು ಹಾಗೂ ಗುರುವಿನ ಋಣ ತೀರಿಸಬೇಕು ಎಂದು ತಿಳಿಸಿದರು.
    ಸಂಸ್ಕಾರ ನೀಡಿದಾಗಲೇ ಮಣ್ಣು, ಗಡಿಗೆಯಗಲಿದೆ, ಸಗಣಿ ಕೂಡ ವಿಭೂತಿಯಾಗುತ್ತದೆ. ಮನುಷ್ಯನಿಗೆ ಸಂಸ್ಕಾರ ನೀಡಿದಾಗ ಅವನು ಮಹಾದೇವನಾಗುತ್ತಾನೆ ಎಂದು ಹೇಳಿದರು.
    ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಬಾಲ್ಯದಲ್ಲೇ ಸಂಸ್ಕಾರದ ಪಾಠ ಸಿಕ್ಕರೆ ಮಾನವನ ಬದುಕು ಸುಂದರವಾಗಿ ಇರಲಿದೆ ಎಂದು ಹೇಳಿದರು.
    ಟ್ರಸ್ಟಿನ ಕಾರ್ಯದರ್ಶಿ ಎನ್. ಅಡಿವೆಪ್ಪ, ನಾಗರಾಜ್ ಯರಗಲ್, ಕೆ.ಟಿ. ಮಹಾಲಿಂಗೇಶ್, ಟಿ. ಜಿ. ಸುರೇಶ್, ಸುಮಂಗಲಮ್ಮ, ಎನ್. ಜಿ. ಅಮರೇಶ್, ಎನ್. ಪಿ. ರೇಖಾ, ಎನ್. ಜಿ. ಪ್ರಕಾಶ್ ಇದ್ದರು. ಮಹಾರುದ್ರಪ್ಪ ಮೆಣಸಿನಕಾಯಿ ಸ್ವಾಗತಿಸಿದರು. ಪತ್ರಕರ್ತ ವೀರಪ್ಪ ಎಂ.ಭಾವಿ ವಂದಿಸಿದರು. ತನುಜಾ ಕಾರ್ಯಕ್ರಮ ನಿರೂಪಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts