More

    ಸಂಸೆ ಗ್ರಾಪಂ ಅಧ್ಯಕ್ಷ ವಿರುದ್ದ ಅವಿಶ್ವಾಸ ಅಂಗೀಕಾರ

    ಕಳಸ: ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೇಯಂಸ ಕುಮಾರ್ ವಿರುದ್ಧ ಸ್ವಪಕ್ಷೀಯ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದರಿಂದ ಅಧ್ಯಕ್ಷ ಶ್ರೇಯಂಸ ಕುಮಾರ್ ಅಧಿಕಾರ ಕಳೆದು ಕೊಂಡಿದ್ದಾರೆ.

    15 ಸದಸ್ಯ ಬಲದ ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 8, ಕಾಂಗ್ರೆಸ್​ನ 5, ಬಿಜೆಪಿಯ 2 ಸದಸ್ಯರಿದ್ದರು. ಗ್ರಾಪಂ ಅಧ್ಯಕ್ಷ ಶ್ರೇಯಂಸ ಕುಮಾರ್​ಗೆ ನೀಡಿದ ಬೆಂಬಲವನ್ನು ಹಿಂಪಡೆದಿರುವುದಾಗಿ 14 ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ 26 ದಿನಗಳ ಹಿಂದೆ ಉಪವಿಭಾಗಾಧಿಕಾರಿ ನಾಗರಾಜ್​ಗೆ ಮನವಿ ಸಲ್ಲಿಸಿದ್ದರು.

    ಅದರಂತೆ ಶನಿವಾರ ಸಂಸೆ ಗ್ರಾಪಂ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ನಾಗರಾಜ್ ಸದಸ್ಯರ ಸಮ್ಮುಖದಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಸಭೆಯಲ್ಲಿ ಅಧ್ಯಕ್ಷ ಶ್ರೇಯಂಸ ಕುಮಾರ್ ಗೈರು ಹಾಜರಾಗಿದ್ದು, ಉಳಿದ 14 ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದ ಅಧ್ಯಕ್ಷ ಶ್ರೇಯಂಸ ಕುಮಾರ್ ಸದಸ್ಯರ ಬೆಂಬಲ ಕಳೆದುಕೊಂಡು ಅಧಿಕಾರ ಕಳೆದು ಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts