More

    ಸಂಶೋಧನೆಯಿಂದ ಆರೋಗ್ಯ ರಕ್ಷಣೆ ಸಾಧ್ಯ

    ಬೆಳಗಾವಿ: ವೈದ್ಯರ ಜ್ಞಾನ ಹಾಗೂ ಸಂಶೋಧನಾ ಪರಿಣಾಮಗಳು ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ ಎಂದು ಕೆಎಲ್‌ಇ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಹೇಳಿದರು.

    ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ರಿಸರ್ಚ್, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ, ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಎಲುಬು-ಕೀಲು ವಿಭಾಗದ ವತಿಯಿಂದ ಕೆಎಲ್‌ಇ ಆಸ್ಪತ್ರೆಯಲ್ಲಿ ವಿಶ್ವ ಸಂಧಿವಾತ ಹಾಗೂ ಆಸ್ಟಿಯೊಪೊರೋಸಿಸ್ ತಡೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಆರೋಗ್ಯ ರಕ್ಷಣೆಗೆ ಒತ್ತು ಕೊಡಬೇಕು. ಗುಣಮಟ್ಟದ ಚಿಕಿತ್ಸೆ ನೀಡಲು ಆಸ್ಪತ್ರೆಯು ಸಕಲ ವ್ಯವಸ್ಥೆ ಕಲ್ಪಿಸಿದೆ ಎಂದು ತಿಳಿಸಿದರು.

    ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ ಅವರು ಡಾ.ಮಾರ್ಟಿನ್ ಶಿವಾಪುರ ಬರೆದ ‘ಸಂಧಿವಾತದಲ್ಲಿ ಫಿಸಿಯೋಥೆರಪಿ’ ಎಂಬ ಪುಸ್ತಕ ಬಿಡುಗಡೆಗೊಳಿಸಿದರು. ಕುಲಸಚಿವರಾದ ಡಾ.ವಿ.ಎ.ಕೋಠಿವಾಲೆ, ಆಸ್ಪತ್ರೆ ಅಭಿವೃದ್ಧಿ ಮತ್ತು ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ.ಪಾಟೀಲ, ಉಪಪ್ರಾಚಾರ್ಯ ಡಾ. ವಿ.ಎಂ.ಪಟ್ಟಣಶೆಟ್ಟಿ, ಡಾ.ರಾಜೇಶ ಪವಾರ, ಡಾ.ಆರೀಫ್ ಮಾಲ್ದಾರ, ಡಾ.ಬಸವರಾಜ ಬಿಜ್ಜರಗಿ, ಡಾ.ಸಾಹಿಲ್ ಡಿ. ಕಾಳೆ ಮತ್ತು ಡಾ.ಉತ್ಕರ್ಷ ಬುರ್ಲಿ, ಎಸ್.ಕೆ. ಸೈದಾಪೂರ, ಡಾ.ಎ.ಎಸ್ ಘೊಗಟೆ, ಡಾ.ಬಿ.ಬಿ.ಪುಟ್ಟಿ, ಡಾ.ದಿನೇಶ ಕಾಳೆ ಇತರಿದ್ದರು. ಎಲುಬು-ಕೀಲು ವಿಭಾಗದ ಮುಖ್ಯಸ್ಥ ಡಾ.ರವಿ ಜತ್ತಿ ಹಾಗೂ ಡಾ.ಆರ್.ಬಿ.ಉಪ್ಪಿನ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts