More

    ಸಂವಿಧಾನ ರಕ್ಷಣೆ ಬಿಜೆಪಿಯಿಂದ ಮಾತ್ರ

    ಬಾಗಲಕೋಟೆ : ಮೂಲ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡಿ, ದೇಶದ ಅಭಿವೃದ್ಧಿಯೊಂದಿಗೆ ಸಂವಿಧಾನದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾದ್ಯವಿದೆ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.

    ಅವರು ಸೋಮವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ನಗರ 3ನೇ ವಾರ್ಡಿನಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರದ ಪಾದಯಾತ್ರೆಯಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು.

    70 ವರ್ಷ ದೇಶವನ್ನಾಳಿದ ಕಾಂಗ್ರೆಸ ಬಡವರನ್ನು ಬಡವರನ್ನಾಗಿಟ್ಟಿರುವುದೆ ಬಹು ದೊಡ್ಡ ಸಾಧನೆ ಯಾಗಿದ್ದು, ಅಟಲ್ ಬಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬಂದ ಮೇಲೆ ದೇಶದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ, ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್.ಅಂಬೆಡ್ಕರವರನ್ನು ಕಾಂಗ್ರೆಸ್ಸ್ ಹೀನಾಯವಾಗಿ ನಡೆಸಿಕೊಂಡಿದ್ದು ತಮಗೆಲ್ಲಾ ಗೊತ್ತಿದೆ, ಪ್ರಧಾನಿ ನರೇಂದ್ರ ಮೋದಿಯವರು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರ ನಡೆದಾಡಿದ ಐದು ಸ್ಥಳವನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಮಾಡಿ ಆ ಸ್ಥಳಗಳನ್ನು ಗೌರವವನ್ನು ಎತ್ತಿ ಹಿಡಿದ್ದಾರೆ, ಸಮಗ್ರ ಅಭಿವೃದ್ಧಿಯ ಜೊತೆಗೆ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಅನ್ನುವಂತೆ ಎಲ್ಲ ವರ್ಗದವರ ಏಳಿಗೆಗೆ ಮೋದಿ ಶ್ರಮಿಸಿದ್ದಾರೆ, ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡು ನೈತಿಕ ಹಕ್ಕು ಕಾಂಗ್ರೆಸ್ಸಿಗಿಲ್ಲಾ, ಜನ ಅರ್ಥ ಮಾಡಿಕೊಂಡು ದೇಶದ ಸಮಗ್ರ ಅಭಿವೃದ್ಧಿ ಭದ್ರತೆಗಾಗಿ ಬಿಜೆಪಿಯನ್ನು ಬೆಂಬಲಿಸಿ ಮತ ನೀಡಿ ಎಂದರು.

    ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನೆ ಮನೆಗೆ ತೆರಳಿ ಮುಂದಿನ ಪಿಳಿಗೆಗೆ ಬೇಕಾಗುವ ಭಾರತದ ಭವ್ಯ ಭವಿಷ್ಯದ ಬಗ್ಗೆ ಬಿಜೆಪಿ ತನ್ನದೆಯಾದ ಕನಸನ್ನು ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ಭವ್ಯ ಭಾರತದ ಕನಸು ನನಸಾಗಲು ಬಿಜೆಪಿಗೆ ಮತ ನೀಡಿ ಎಂದರು.

    ನಗರದ 3ನೇ ವಾರ್ಡಿನಲ್ಲಿನ ಶ್ರೀ ನಾಗಪ್ಪನ ಕಟ್ಟಿ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಏಕ್ಷಟೆಂಶನ ಏರಿಯಾ,ವಿನಾಯಕಕ ನಗರ ಕಾಲೋನಿ, ಲಕ್ಷ್ಮೀ ನಗರ,ವಿನಾಯಕ ನಗರ,ಶಾಂತಿ ನಗರದಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಲಾಯಿತು, ಮನೆ ಮನೆ ತೆರಳಿದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರಿಗೆ ವಿಜಯಮಾಲೆ ಹಾಕಿ,ಆರತಿಮಾಡಿ,ಶಾಲೂ ಹೊದಿಸಿ ಸನ್ಮಾನಮಾಡಿ ಸಿಹಿ ಹಂಚುವ ಮೂಲಕ ಹರಸಿ ಗೆದ್ದುಬನ್ನಿ ಎಂದು ಹಾರೈಸಿದರು.

    ಪಾದಯಾತ್ರೆಯಲ್ಲಿ ನಗರಸಭೆ ಸದಸ್ಯೆ ಶಿವಲೀಲಾ ಪಟ್ಟಣಶೇಟ್ಟಿ, ಬಸವರಾಜ ಯಂಕಂಚಿ, ಗುರುಬಸವ ಸೂಳಿಬಾಬಿ, ಬಸವರಾಜ ಅಥಣಿ, ಪ್ರಕಾಶ ರೇವಡಿಗಾರ, ಮಹೇಶ ಅಂಗಡಿ, ಬಸವರಾಜ ಅಥಣಿ, ವಿಜಯ ಅಂಗಡಿ, ಶಿವಾನಂದ ಟವಳಿ, ಆನಂದ ದರೆನ್ನವರ, ಶ್ರೀಧರ ಶಹಾಪುರ, ಬಸವರಾಜ ಹುನಗುಂದ, ನಾಗರತ್ನಾ ಹೆಬ್ಬಳ್ಳಿ, ಸ್ಮೀತಾ ಪವಾರ, ಅನಿತಾ ಸರೋದೆ, ಶೋಭಾ ರಾವ್. ಸವಿತಾ ಲಂಕ್ಕೆನ್ನವರ, ಬಸವರಾಜ ಅವರಾದಿ, ಮುತ್ತಣ್ಣ ಬೆಣ್ಣೂರ, ಯಲ್ಲಪ್ಪ ನಾರಾಯಣಿ, ಚಂದ್ರು ಸರೂರ, ಚಂದ್ರು ರಾಮವqಗಿ, ಅನಿಲ ನಾಯಕ, ವಿಲಾಸ ವಂದಕುದರಿ,ಸುರೇಶ ಮಜ್ಜಗಿ,ಮಾನೇಶ ಅಂಬಿಗೇರ, ಅಶೋಕ ಪವಾರ,ಶಂಕರ ಕದಂ, ಬಂದೆನವಾಜ್ ದೋನಿ,ಪಾಲಕ್ಷಿ ಕಟ್ಟಿಮಠ, ಇಂಗಳಿಗಿ ಸರ, ಬವಸರಾಜ ಸೋರಗಾಂವಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts