More

    ಸಂವಿಧಾನದ ಆಶಯಕ್ಕೆ ಬದ್ಧವಾದ ಆಡಳಿತ

    ಸಿಂದಗಿ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ನಮ್ಮ ಸಂವಿಧಾನದ ಆಶಯಕ್ಕೆ ಬದ್ಧವಾಗಿ, ಕಾನೂನು ಪಾಲನೆ, ಅಭಿವೃದ್ಧಿ ಮತ್ತು ಜನರ ಹಕ್ಕುಗಳಿಗಾಗಿ ಶ್ರಮಿಸುತ್ತಿವೆ ಎಂದು ತಹಸೀಲ್ದಾರ್ ಡಾ.ಪ್ರದೀಪ ಕುಮಾರ ಹಿರೇಮಠ ಹೇಳಿದರು.

    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

    ಕ್ಷೇತ್ರದ 43,823 ಜನ ರೈತರನ್ನು ಎಫ್‌ಐಡಿ ಹಾಗೂ ಬರ ಪರಿಹಾರ ತಂತ್ರಾಂಶದಡಿ ದಾಖಲಿಸುವ ಕಾರ್ಯ ಮಾಡಲಾಗಿದೆ. ಸರ್ಕಾರ ನೀಡುವ ಬರ ಪರಿಹಾರದ ಹಣ ನೇರವಾಗಿ ಅವರ ಖಾತೆಗಳಿಗೆ ಜಮಾವಣೆಗೊಳ್ಳುತ್ತಿದೆ. ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಜನರಿಗಾಗಿ 42 ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.

    ಜಿಲ್ಲೆಯ 13 ತಾಲೂಕುಗಳಲ್ಲಿ ಸಿಂದಗಿ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ 20 ಹೋಬಳಿಗಳಲ್ಲಿ ಸಿಂದಗಿ ಮೂರನೇ ಸ್ಥಾನಕ್ಕೇರಿದೆ. ರೈತರಿಗೆ ವಿತರಿಸಲಾಗುವ ಪಹಣಿ ಕಾಲಂನಲ್ಲಿ ನಮೂನೆ 3 ಮತ್ತು 9ರ ಕಡತಗಳಲ್ಲಿ 20 ಕಡತಗಳು ಮಾತ್ರ ಬಾಕಿ ಉಳಿದಿವೆ. ಪೌತಿ ಪಹಣಿಗಳ ಪ್ರಕರಣಗಳಲ್ಲಿ ತಾಂತ್ರಿಕ ಕಾರಣದಿಂದ ಒಂದು ಪ್ರಕರಣ ಬಾಕಿ ಉಳಿದಿವೆ ಎಂದರು.

    ಕಂದಾಯ ನ್ಯಾಯಾಲಯದಲ್ಲಿ ಕಳೆದ 5 ಹಾಗೂ ಎರಡು ವರ್ಷದಿಂದ ಬಾಕಿ ಉಳಿದಿದ್ದ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಅಲ್ಲದೆ 6 ತಿಂಗಳಿಗೂ ಹೆಚ್ಚಿನ ಬಾಕಿ ಪ್ರಕರಣಗಳಿಲ್ಲದಂತೆ ತಾಲೂಕು ಆಡಳಿತ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಕಾಲಮಿತಿಯಲ್ಲಿಯೇ ಅಚ್ಚುಕಟ್ಟಿನ ಚುರುಕಿನ ಕಾರ್ಯ ಮಾಡಿದೆ ಎಂದರು.

    ಸಿಪಿಐ ಡಿ.ಹುಲಗಪ್ಪ, ತಾಪಂ ಇಒ ರಾಮು ಅಗ್ನಿ, ಬಿಇಒ ಆರೀಫ್ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕೃಷಿ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ, ಅಶೋಕ ತೆಲ್ಲೂರ, ಮಾಜಿ ಸೈನಿಕ ಶ್ರೀಶೈಲ ಯಳಮೇಲಿ ಮಾತನಾಡಿದರು.

    ಪಟ್ಟಣದ ವಿವಿಧ ಶಾಲೆ ಮಕ್ಕಳು ಸಮೂಹ ನೃತ್ಯಗಳನ್ನು ಪ್ರದರ್ಶಿಸಿದರು. ಎನ್‌ಸಿಸಿ ಕೆಡೆಟ್, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಇತರ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕ ಕವಾಯತು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts