More

    ಸಂಬಂಧ ಗಟ್ಟಿಗೊಳಿಸುವ ಹಬ್ಬ-ಹರಿದಿನ

    ಕೆಂಭಾವಿ : ಹಬ್ಬ-ಹರಿದಿನಗಳು ಮನುಷ್ಯನ ಸಂಬAಧವನ್ನು ಗಟ್ಟಿಕೊಳಿಸುತ್ತವೆ ಎಂದು ಬಿಜೆಪಿ ಯುವ ಮುಖಂಡ ಅಮೀನರೆಡ್ಡಿ ಪಾಟೀಲ್ ಯಾಳಗಿ ಹೇಳಿದರು.

    ದಸರಾ ಉತ್ಸವ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಹಬ್ಬ ಆಚರಣೆ ಮಾಡುವುದರಿಂದ ಪ್ರತಿಯೊಬ್ಬರ ಸಂಬAಧಗಳು ಹೆಚ್ಚುತ್ತವೆ ಎಂದರು.

    ದಸರಾ ಉತ್ಸವ ಸಮಿತಿ ಮೂರು ವರ್ಷದಿಂದ ವಿಶೇಷ ಕರ‍್ಯಕ್ರಮ ಆಯೋಜಿಸುವ ಮೂಲಕ ಶಾಲಾ ಮಕ್ಕಳಿಗೆ, ರೈತರಿಗೆ, ಮಹಿಳೆಯರಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧಕರನ್ನು ಗುರುತಿಸುತ್ತಿರುವ ಸಮಿತಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

    ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಮಾತನಾಡಿ, ಪಟ್ಟಣದ ಹಿರಿಯರೆಲ್ಲರು ಸೇರಿ ಬಜಾರ ಹನುಮಾನ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಹಾಗೂ ಸಾರ್ವಜನಿಕರಿಂದ ದೇಣಿಗೆ ಪಡೆದು ಶೀಘ್ರ ಜೀರ್ಣೋದ್ಧಾರಕ್ಕೆ ಚಾಲನೆ ದೊರಕುವಂತಾಗಬೇಕು. ಅಲ್ಲದೆ ತಮ್ಮೆಲ್ಲರ ಸಹಕಾರ ಬಹಳ ಅಗತ್ಯ ಎಂದರು.

    ದಸರಾ ಸಮಿತಿ ಅಧ್ಯಕ್ಷ ಡಿ.ಸಿ.ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶರಣಬಸವ (ಕಾಕಾ) ಡಿಗ್ಗಾವಿ, ಅರುಣೋದಯ ಸೊನ್ನದ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ್ ಸಾಸನೂರ್, ಮಹಿಪಾಲರೆಡ್ಡಿ ಡಿಗ್ಗಾವಿ, ಕೃಷ್ಣಯ್ಯ ಗುತ್ತೇದಾರ್, ಇಲಿಯಾಸ್ ವಡಕೇರಿ, ಬಿ. ರಾಘವೇಂದ್ರ, ತೋಟಪ್ಪ ಸಾಹು, ಬಸವರಾಜ ಪತ್ತಾರ, ಅರವಿಂದ್ರ ಪಟೇಲ್ ಇತರರಿದ್ದರು.

    ಬಂದೇನವಾಜ ನಾಲತವಾಡ ಸ್ವಾಗತಿಸಿದರು. ಪರಶುರಾಮ ನಾರಾಯಣಕರ್ ವಂದಿಸಿದರು. ಮಡಿವಾಳಪ್ಪ ಪಾಟೀಲ್ ನಿರೂಪಣೆ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪಟ್ಟಣದ ಹಿರಿಯ ಮುಖಂಡರು ಹಾಗೂ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ಅವರಿಗೆ ಈ ವರ್ಷದ ವಿಶೇಷ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts