More

    ಸಂಪರ್ಕ ರಸ್ತೆ ನಿರ್ವಿುಸಲು ಆಗ್ರಹ

    ಕುಮಟಾ: ಪಟ್ಟಣದ ಡಯಟ್ ಆವಾರದೊಳಗೆ ಮೂರೂರು ರಸ್ತೆ, ಸಿದ್ದನಬಾವಿ ರಸ್ತೆ ಸಂರ್ಪಸುವಂತೆ ಕೂಡು ರಸ್ತೆಯನ್ನು ನಿರ್ವಿುಸುವಂತೆ ಮನವಿ ಮಾಡಿದ ಸಾರ್ವಜನಿಕರು, ಶಾಸಕ ದಿನಕರ ಶೆಟ್ಟಿ ಅವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಮನವರಿಕೆ ಮಾಡಿಕೊಟ್ಟರು.

    ಪುರಸಭೆಯ ಸಿದ್ದನಬಾವಿ ವಾರ್ಡ್ ಸದಸ್ಯ ಸಂತೋಷ ನಾಯ್ಕ ಮಾತನಾಡಿ, ಹೆಗಡೆ ಕ್ರಾಸ್ ಸಮೀಪದ ಸಿದ್ದನಬಾವಿ ರಸ್ತೆ, ಮೂರೂರು ರಸ್ತೆ ನಡುವೆ ವಿಶಾಲವಾದ 20 ಎಕರೆಗೂ ಹೆಚ್ಚು ಜಾಗದಲ್ಲಿ ಡಯಟ್ ಆವಾರವಿದೆ. ಡಯಟ್ ಆವಾರದಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರವಿದೆ. ಮಿನಿ ವಿಧಾನಸೌಧ ಕಟ್ಟಲಾಗುತ್ತಿದೆ. ಇದೊಂದೆ ಪ್ರದೇಶದಲ್ಲಿ ಕಾಲೇಜ್, ಪ್ರಕೃತಿ ವಿಕೋಪ ಆಶ್ರಯ ತಾಣವೂ ಇದೆ. ಸಿದ್ದನಬಾವಿ ಭಾಗದವರು ಡಯಟ್ ಆವಾರವನ್ನು ದಾಟಿ ಒಳ ರಸ್ತೆಯಲ್ಲಿ ಸಾಗುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುತ್ತುಬಳಸಿ ಸಂಚರಿಸುವುದು ತಪ್ಪುತ್ತದೆ ಎಂದರು.

    ‘ಸಿದ್ದನಬಾವಿ ರಸ್ತೆಯಿಂದ ಕೆಲವೇ ಅಡಿ ದೂರದ ಅಂಗನವಾಡಿ ಕೇಂದ್ರಕ್ಕೆ 2 ಕಿಮೀ ಸುತ್ತಿ ನಮ್ಮ ಮಕ್ಕಳನ್ನು ಕಳಿಸುವುದು ಸುರಕ್ಷಿತವಲ್ಲ. ನೆಲ್ಲಿಕೇರಿ ಶಾಲೆಗೆ ಹೋಗುವ ಮಕ್ಕಳಿಗೂ ಇದೇ ಸಮಸ್ಯೆ ಎದುರಾಗುತ್ತದೆ. ಡಯಟ್ ಆವಾರಕ್ಕೆ ಕಾಂಪೌಂಡ್ ಹಾಕುವುದಕ್ಕಿಂತ ಮುಂಚಿನಿಂದಲೂ ಇಲ್ಲಿ ಸಾರ್ವಜನಿಕರು ಓಡಾಡುವುದಕ್ಕೆ ಅವಕಾಶವಿತ್ತು. ಕಾಂಪೌಂಡ್ ಹಾಕಿದ ಬಳಿಕ ಚಿಕ್ಕ ಕಾಲುದಾರಿ ಮಾತ್ರ ಉಳಿಸಿದ್ದರು. ಕೆಲವು ದಿನಗಳ ಹಿಂದೆ ಕಾಲುದಾರಿಯನ್ನೂ ಬಂದ್ ಮಾಡಿದ್ದಾರೆ. ಇಲ್ಲಿ ಕೇವಲ ನೂರು ಮೀಟರ್​ನಷ್ಟು ಉದ್ದಕ್ಕೆ ರಸ್ತೆ ಅನುಕೂಲ ಮಾಡಿಕೊಟ್ಟರೆ ಶಾಶ್ವತವಾಗಿ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ’ ಎಂದು ಕೆಲ ಮಹಿಳೆಯರು ಹೇಳಿದರು.

    ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ, ಈ ಬಗ್ಗೆ ಯೋಜನೆ ರೂಪಿಸಿ ಶೀಘ್ರದಲ್ಲಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಸ್ಥಳೀಯರಾದ ಆನಂದ ಶೆಟ್ಟಿ, ಅಶೋಕ ಶೆಟ್ಟಿ, ಶ್ರೀಧರ ನಾಯ್ಕ, ಅಣ್ಣಪ್ಪ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts