More

    ಸಂತ್ರಸ್ತರಿಂದ ಅರೆಬೆತ್ತಲೆ ಪ್ರತಿಭಟನೆ



    ಹುಬ್ಬಳ್ಳಿ: ಕುಂದಗೋಳ ಕ್ಷೇತ್ರ ವ್ಯಾಪ್ತಿಯಲ್ಲಿ ನೆರೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಸಂತ್ರಸ್ತರು ಬುಧವಾರ ನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ದಯಾ ಮರಣಕ್ಕೆ ಆಗ್ರಹಿಸಿದರು.

    ಕರ್ನಾಟಕ ಪ್ರಜಾಕ್ರಾಂತಿ ಸೇನೆ ಮತ್ತು ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅರೆಬೆತ್ತಲೆಯಾಗಿ ಬಾಯಿ ಬಡಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಕುಂದಗೋಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ಭಾಗ ಹುಬ್ಬಳ್ಳಿ ತಾಲೂಕಿಗೆ ಸೇರಿರುವುದರಿಂದ ಇಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ಮಾತನಾಡಿ, ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ಸುರಿದ ಮಳೆಗೆ ಕ್ಷೇತ್ರದಲ್ಲಿ 20 ಸಾವಿರ ಮನೆಗಳು ಕುಸಿದಿವೆ. 20 ಸಾವಿರ ರೈತರು ಬೆಳೆ ಹಾನಿ ಅನುಭವಿಸಿದ್ದಾರೆ. ಸಮರ್ಪಕವಾಗಿ ಪರಿಹಾರ ವಿತರಣೆಯಾಗಿಲ್ಲ. ಕ್ಷೇತ್ರದಲ್ಲಿ 10 ಸಾವಿರ ರೈತರಿಗೆ ಸಾಲ ಮನ್ನಾ ಋಣ ಮುಕ್ತ ಪತ್ರ ನೀಡಲಾಗಿದೆ. ಆದರೆ, ಬ್ಯಾಂಕ್​ಗಳು ಸಾಲ ಮನ್ನಾ ಆಗಿಲ್ಲ ಎಂದು ಹೇಳಿ ವಸೂಲಿಗೆ ಮುಂದಾಗಿವೆ. ಪರಿಹಾರ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಹಾಗೂ ಭಾಗಶಃ ಹಾನಿಗೊಳಗಾದವರಿಗೆ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಎಚ್.ಕೆ. ಪಾಟೀಲ ದೇವನೂರ, ಸಿದ್ದು ತೇಜಿ, ಪೀತಾಂಬರಪ್ಪ ಬಿಳಾರ, ಲೋಕನಾಥ ಹೆಬಸೂರ, ಮಂಜುನಾಥ ಕಾಲವಾಡ, ಜಿ.ಡಿ. ಘೊರ್ಪಡೆ, ನಿಂಗಪ್ಪ ಹುಬ್ಬಳ್ಳಿ, ಅಪ್ಪಣ್ಣ ಹಿರೇಗೌಡರ್, ಶೋಭಾ ಕಮತರ, ಗಿರಿಮಲ್ಲವ್ವ, ರಾಜು ನಾದಾಫ್ ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts