More

    ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಜುಗರ ಬೇಡ

    ಕಾರವಾರ: ನೋವು ರಹಿತವಾದ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಪುರುಷರು ಮುಜುಗರವಿಲ್ಲದೇ ಮುಂದೆ ಬರಬೇಕು ಎಂದು ಡಿಎಚ್​ಒ ಡಾ.ಶರದ್ ನಾಯಕ ಹೇಳಿದರು.

    ನೋ ಸ್ಕಾಲಪೆಲ್ ವ್ಯಾಸೆಕ್ಟಮಿ ಪಾಕ್ಷಿಕದ ವೇಳಾ ಪಟ್ಟಿ ಹಾಗೂ ಬ್ರೋಶರನ್ನು ಶನಿವಾರ ಅವರು ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

    ನವೆಂಬರ್ 28 ರವರೆಗೆ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ ನಡೆಯಲಿದ್ದು, ನಂತರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಡಿ.4 ರವರೆಗೆ ಶಿಬಿರ ನಡೆಯಲಿದೆ ಎಂದು ವಿವರಿಸಿದರು.

    ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಅನ್ನಪೂರ್ಣ ವಸ್ತ್ರದ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ಶಂಕರ ರಾವ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ್, ಸಹಾಯಕ ಸಾಂಖ್ಯಿಕ ಅಧಿಕಾರಿ ರಾಘವೇಂದ್ರ ಹೆಗಡೆ ಇದ್ದರು.

    ಶಿಬಿರಗಳ ವೇಳಾ ಪಟ್ಟಿ: ನವೆಂಬರ್ 28 ರಂದು ಶಿರಸಿ, ಸಿದ್ದಾಪುರ, 30 ರಂದು ಯಲ್ಲಾಪುರ ಮತ್ತು ಮುಂಡಗೋಡ, ಡಿಸೆಂಬರ್ 1 ರಂದು ಹಳಿಯಾಳ ಹಾಗೂ ಜೊಯಿಡಾ, 2 ರಂದು ಕುಮಟಾ ಹಾಗೂ ಹೊನ್ನಾವರ, 3 ರಂದು ಕಾರವಾರ ಹಾಗೂ ಅಂಕೋಲಾ, 4 ರಂದು ಭಟ್ಕಳದಲ್ಲಿ ನೋ ಸ್ಕಾಲಪೆಲ್ ವ್ಯಾಸೆಕ್ಟಮಿ ಶಿಬಿರಗಳು ನಡೆಯಲಿವೆ. ಡಾ.ರಾಮಾ ಅವರು ಶಸ್ತ್ರ ಚಿಕಿತ್ಸೆ ಮಾಡುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts