More

    ಸಂಚಾರ ನಿಯಮ ಜಾರಿಗೆ ನಿರಾಸಕ್ತಿ

    ಕಾರವಾರ: ನಗರದಲ್ಲಿ ಸಂಚಾರ ನಿಯಮ ಜಾರಿಗೆ ಸಿದ್ಧವಾಗಿದ್ದ ಕರಡು ಒಂದು ವರ್ಷದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಮತಿಯಾಗದೆ ಕೊಳೆಯುತ್ತಿದೆ.

    ರ್ಪಾಂಗ್, ಒನ್​ವೇ ಸೇರಿ ಪ್ರಮುಖ ಸಂಚಾರ ನಿಯಮಾವಳಿ ಜಾರಿಗೆ 2020 ರ ಜುಲೈ 2ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆಗಿನ ಪ್ರಭಾರ ಪೌರಾಯುಕ್ತೆ ಪ್ರಿಯಾಂಗಾ ಎಂ. ಅವರು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದರು. ಅನುಮತಿಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ರಸ್ತೆ ಸುರಕ್ಷತಾ ಸಮಿತಿಗೆ ಸಲ್ಲಿಸಿದ್ದರು. ಆದರೆ, ವರ್ಷ ಕಳೆದರೂ ಅನುಮತಿ ದೊರೆಯದೆ ನಗರದಲ್ಲಿ ಸ್ಪಷ್ಟ ಸಂಚಾರ ನಿಯಮ ಜಾರಿಯಾಗಿಲ್ಲ.

    ಏನೇನು ನಿಯಮ..?

    2500 ರಷ್ಟು ಬೈಕ್​ಗಳನ್ನು ವಿವಿಧೆಡೆ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನು ನಗರದ ಮುಖ್ಯ ಭಾಗದಲ್ಲಿ 280 ರಷ್ಟು ನಾಲ್ಕು ಚಕ್ರದ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಗೀತಾಂಜಲಿ ಟಾಕೀಸ್​ನಿಂದ ಗಣಪತಿ ದೇವಸ್ಥಾನದವರೆಗೆ ಭಾರಿ ವಾಹನಗಳಿಗೆ ದ್ವಿಮುಖ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸಣ್ಣ ರಸ್ತೆಗಳಲ್ಲಿ ಒಂದೊಂದು ದಿನ ಒಂದೊಂದು ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

    ನೋ ರ್ಪಾಂಗ್ ಪ್ರದೇಶ:

    ಕಾರವಾರ- ಇಳಕಲ್ ರಸ್ತೆಯಲ್ಲಿ ಸುಭಾಷ ವೃತ್ತದಿಂದ ಜನತಾ ಬಜಾರ್​ವರೆಗೆ, ಜನತಾ ಬಜಾರ್​ನಿಂದ ಗ್ರೀನ್ ಸ್ಟ್ರೀಟ್ ಲಿಂಕ್ ರಸ್ತೆ. ಹೈಚರ್ಚ್ ರಸ್ತೆಯಲ್ಲಿ ದೋಬಿಘಾಟ್​ನಿಂದ ಕಾರವಾರ- ಇಳಕಲ್ ರಸ್ತೆಯವರೆಗೆ. ಕಾರವಾರ – ಕೋಡಿಬಾಗ ರಸ್ತೆಯಿಂದ ಗೀತಾಂಜಲಿ ಚಿತ್ರಮಂದಿರದವರೆಗೆ. ಕಮಲಾಕರ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಎಂಜಿ ರಸ್ತೆವರೆಗೆ. ಪಿಕಳೆ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಎಂಜಿ ರಸ್ತೆವರೆಗೆ, ಸಿವಿಲ್ ಕೋರ್ಟ್ ರಸ್ತೆಯಲ್ಲಿ ಗ್ರೀನ್ ಸ್ಟ್ರೀಟ್​ನಿಂದ ಕಾರವಾರ- ಕೋಡಿಬಾಗ ರಸ್ತೆವರೆಗೆ. ಗ್ರೀನ್ ಸ್ಟ್ರೀಟ್​ನಲ್ಲಿ ಟೌನ್ ಪೊಲೀಸ್ ಠಾಣೆಯಿಂದ ಹೊಸ ಮೀನು ಮಾರುಕಟ್ಟೆವರೆಗೆ. ಕಾರವಾರ- ಕೋಡಿಬಾಗ ರಸ್ತೆಯಲ್ಲಿ ಸವಿತಾ ಹೋಟೆಲ್​ನಿಂದ ದೋಬಿಘಾಟ್ ರಸ್ತೆಯವರೆಗೆ. ಎಂಜಿ ರಸ್ತೆಯಲ್ಲಿ ಲೈಬ್ರರಿ ರಸ್ತೆಯಿಂದ ಕಾರವಾರ ಇಳಕಲ್ ರಸ್ತೆವರೆಗೆ ಯಾವುದೇ ವಾಹನ ನಿಲುಗಡೆ ನಿಷೇಧಿಸಲಾಗಿದೆ.

    ಈ ಹಿಂದೆಯೂ ಮಾಡಲಾಗಿತ್ತು

    ಸಂಚಾರ ನಿಯಮ ಕರಡು ಸಿದ್ಧವಾಗಿದ್ದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆಯೂ ಒಮ್ಮೆ ಸಂಚಾರ ನಿಯಮ ಸಂಬಂಧ ಪೊಲೀಸ್ ಇಲಾಖೆ, ನಗರಸಭೆ ಜಂಟಿ ಸರ್ವೆ ನಡೆಸಿ ನಗರಸಭೆ ಆಡಳಿತ ಸಮಿತಿಯ ಅನುಮೋದನೆ ಪಡೆದು ನಿಯಮ ಜಾರಿಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಆಗಲೂ ನಿಯಮ ಜಾರಿಯಾಗಿರಲಿಲ್ಲ.

    ಶೀಘ್ರದಲ್ಲೇ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆ ಕರೆದು ಕರಡನ್ನು ಪರಿಶೀಲಿಸಿ, ಕಾರವಾರ ನಗರದಲ್ಲಿ ಸಂಚಾರ ನಿಯಮಗಳನ್ನು ಕ್ರಮಬದ್ಧಗೊಳಿಸಲು ಕ್ರಮ ವಹಿಸಲಾಗುವುದು.

    | ಮುಲ್ಲೈ ಮುಗಿಲನ್

    ಜಿಲ್ಲಾಧಿಕಾರಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts