More

    ಸಂಘಟನೆಯಿಂದ ಸಮಸ್ಯೆ ಬಗೆಹರಿಯಲಿದೆ

    ಸಕಲೇಶಪುರ: ಸಂಘಟನೆಯಿಂದ ಮಾತ್ರ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತೆಂಕಲಗೋಡು ಮಠದ ಶ್ರೀಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


    ತಾಲೂಕಿನ ಐಗೂರು ಗ್ರಾಮದಲ್ಲಿ ಗುರುವಾರ ಯಸಳೂರು ಹೋಬಳಿ ಕಾಫಿ ಬೆಳೆಗಾರರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಕಾಫಿ ಬೆಳೆಗಾರರು ಇಂದು ಅತಿವೃಷ್ಟಿ, ಕಾಡುಪ್ರಾಣಿಗಳ ಹಾವಳಿ, ಕೂಲಿಕಾರ್ಮಿಕರ ಸಮಸ್ಯೆ ಸೇರಿದಂತೆ ಅಧಿಕ ಪ್ರಮಾಣದಲ್ಲಿ ಹೆಚ್ಚಿರುವ ರಸಗೊಬ್ಬರ, ಕೀಟನಾಶಕಗಳ ಬೆಲೆಯಿಂದಾಗಿ ಕಾಫಿ ಬೆಳೆಗಾರರು ತೋಟಗಳ ನಿರ್ವಹಣೆ ತೀರ ಕಷ್ಟಕರವಾಗಿ ಬದಲಾಗಿದೆ. ಕನಿಷ್ಠ ಸಮಸ್ಯೆಗಳ ಪರಿಹಾರಕ್ಕಾದರೂ ಸಂಘಟಿತರಾಗಿ ಹೋರಾಟ ನಡೆಸುವುದು ಅನಿವಾರ್ಯ. ಆದರೆ ಕೆಲವು ಬೆಳೆಗಾರರು ಸಂಘಟನೆಯೊಂದಿಗೆ ಅಂತರ ಕಾಯ್ದುಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.


    ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ, ನಿಜವಾದ ಪರಿಸರ ಪ್ರೇಮಿಗಳು ಕಾಫಿ ಬೆಳೆಗಾರರು. ಆದರೆ ವಿಚಾರ ತಿಳಿಯದ ಕೆಲವು ಸ್ವಯಂಘೋಷಿತ ಪರಿಸರವಾದಿಗಳು ಕಾಫಿ ಬೆಳೆಗಾರರು ಪರಿಸರಕ್ಕೆ ಕಂಟಕ ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸುವುದು ಇಂದಿನ ಅನಿವಾರ್ಯವಾಗಿದೆ ಎಂದರು.


    ಕಾಫಿ ಮಂಡಳಿ ಉಪನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ವಿಜಯಚಿತ್ರಾ, ವಿಜ್ಞಾನಿ ಅರುಣ್‌ಕುಮಾರ್, ಮುಖಂಡರಾದ ಐ.ಎಂ.ದೇವರಾಜ್, ಕೆ.ಬಿ.ಗಂಗದಾರ್, ಅನಿಲ್‌ಕುಮಾರ್ ಮುಂತಾದವರಿದ್ದರು.

    ಸಕಲೇಶಪುರ ತಾಲೂಕಿನ ಐಗೂರು ಗ್ರಾಮದಲ್ಲಿ ಯಸಳೂರು ಹೋಬಳಿ ಕಾಫಿ ಬೆಳೆಗಾರರ ವಾರ್ಷಿಕ ಸಭೆಯನ್ನು ತೆಂಕಲಗೋಡು ಮಠದ ಶ್ರೀಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸುಬ್ರಹ್ಮಣ್ಯ, ಮಲ್ಲಿಕಾರ್ಜುನ್, ವಿಜಯಚಿತ್ರಾ, ಅರುಣ್‌ಕುಮಾರ್, ಐ.ಎಂ.ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts