More

    ಸಂಘಟನೆಯಿಂದ ಬಿಜೆಪಿಗೆ ಸಂಸ್ಕಾರ ; ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ

    ತಿಪಟೂರು: ಸಂಘಟನೆ ಮೂಲಕ ಸಂಸ್ಕಾರ ಕಲಿತಿರುವ ಬಿಜೆಪಿ ಸಮಾಜದಲ್ಲಿ ಸೇವಾ ಕಾರ್ಯಗಳನ್ನು ಮುಂದುವರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ನಗರದ ಸತ್ಯಗಣಪತಿ ಸಮುದಾಯ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ, ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಬಿಜೆಪಿ ಹಾಗೂ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

    ಬಿಜೆಪಿಗೆ ಸಂಘಟನೆ ಮೂಲಕ ಸಂಸ್ಕಾರ ಬಂದಿದೆ. ಇದನ್ನು ಚಾಚೂ ತಪ್ಪದೆ, ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಮಾಜದಲ್ಲಿ ಸೇವಾ ಕಾರ್ಯ ಮಾಡಲು ಮುಂದಾಗಿದ್ದು, ಇದರ ಅಂಗವಾಗಿ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
    ದೇಶದಲ್ಲಿ ಮತ್ತೊಮ್ಮೆ ಎಲ್ಲ ತರಹದ ಪರಿಸ್ಥಿತಿಗಳ ಸುಧಾರಣೆ ಆಗಬೇಕೆಂಬುದು ಬಿಜೆಪಿಯ ಹಂಬಲ. ಇದು ದೇಶಕ್ಕೆ ಸೀಮಿತವಾಗದೆ ಇಡೀ ವಿಶ್ವವೇ ಭಾರತದತ್ತ ಮುಖ ಮಾಡಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಭಾರತ ಮತ್ತೊಮ್ಮೆ ವಿಶ್ವ ಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದರು.

    ಶ್ರೀದೇವಿ ಆಸ್ಪತ್ರೆ ವೈದ್ಯ ಡಾ.ಪಿ.ಜಿ.ದೀಪಕ್ ಮಾತನಾಡಿ, ಹೃದಯ ತಜ್ಞರು, ಇಎನ್‌ಟಿ ಕೀಲು ಮೂಳೆ ತಜ್ಞರು ಸೇರಿ 18ಕ್ಕೂ ಹೆಚ್ಚು ವೈದ್ಯರ ತಂಡ ಇಲ್ಲಿಗೆ ಬಂದಿದ್ದಾರೆ. ತಪಾಸಣೆಗೆ ಒಳಗಾಗುವವರಿಗೆ ಉಚಿತವಾಗಿ ಇಸಿಜಿ ಪರೀಕ್ಷೆ ಮಾಡಿ, ಹೃದಯ ಸಂಬಂಧಿ ಕಾಯಿಲೆ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಉಚಿತ ಚಿಕಿತ್ಸೆ ಕೊಡಲಾಗುವುದು. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಹೃದಯ ತಪಾಸಣೆಗೆ ಒಳಪಟ್ಟ 118 ಜನರ ಪೈಕಿ 72 ಮಂದಿ ತೀವ್ರ ತರದ ಹೃದಯ ರೋಗಕ್ಕೆ ತುತ್ತಾಗಿರುವುದು ತಪಾಸಣೆ ವೇಳೆ ಕಂಡು ಬಂದಿದ್ದು, ಇವರಿಗೆ ಮುನ್ನೆಚ್ಚರಿಕೆ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಬರಲು ವೈದ್ಯರು ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts