More

    ಸಂಗಮ ಚಿತ್ರಮಂದಿರ ಕಾರ್ಯಾರಂಭ

    ಧಾರವಾಡ: 8 ತಿಂಗಳ ಬಳಿಕ ರಾಜ್ಯಾದ್ಯಂತ ಶುಕ್ರವಾರದಿಂದ ಚಿತ್ರಮಂದಿರಗಳು ಆರಂಭಗೊಂಡವು. ಅದರಂತೆ ನಗರದಲ್ಲೂ ಆರಂಭಗೊಂಡ ಹಿನ್ನೆಲೆಯಲ್ಲಿ ಚಿತ್ರಮಂದಿರದ ಸಿಬ್ಬಂದಿಗೆ ಸಿನಿಪ್ರಿಯರ ಬಳಗದಿಂದ ಸಿಹಿ ನೀಡಿ ಸ್ವಾಗತಿಸಲಾಯಿತು.

    ಕರೊನಾ ಲಾಕ್​ಡೌನ್ ಬಳಿಕ ಇದೇ ಮೊದಲ ಬಾರಿಗೆ ಆರಂಭಗೊಂಡ ನಗರದ ಸಂಗಮ ಚಿತ್ರಮಂದಿರದಲ್ಲಿ ಮನ್ಸೊರೆ ನಿರ್ದೇಶನದ ‘ಆಕ್ಟ್ 1978’ ಸಿನಿಮಾ ಪ್ರದರ್ಶನಗೊಂಡಿತು. ಈ ಹಿನ್ನೆಲೆಯಲ್ಲಿ ಮೊದಲ ಶೋ ಆರಂಭಕ್ಕೂ ಮುಂಚೆ ಕೆಲಸ ನಿರ್ವಹಿಸಲು ಬಂದ ಚಿತ್ರಮಂದಿರದ ಸಿಬ್ಬಂದಿಯನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಈ ವೇಳೆ ಸಿನಿಪ್ರಿಯರ ಬಳಗದ ವತಿಯಿಂದ ಸ್ವೀಟ್ ಬಾಕ್ಸ್ ನೀಡಿ ಸ್ವಾಗತಿಸಲಾಯಿತು. ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಶಿವಕುಮಾರ ಸುಬ್ಬಯ್ಯ ಹಾಗೂ ಧಾರವಾಡದ ಯುವ ಲೇಖಕ ರಾಜಕುಮಾರ ಮಡಿವಾಳರ ನೇತೃತ್ವದಲ್ಲಿ ಚಿತ್ರಮಂದಿರ ಸಿಬ್ಬಂದಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು. 8 ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಶೀಘ್ರ ಆರಂಭವಾಗಬೇಕು ಎಂಬುದು ಸಿನಿಪ್ರಿಯರ ಆಶಯವಾಗಿತ್ತು. ಶುಕ್ರವಾರದ ಮೊದಲ ಶೋಗೆ ಉತ್ತಮ ಸ್ಪಂದನೆ ವ್ಯಕ್ತವಾಗಿ, ಆಕ್ಟ್ 1978 ಸಿನಿಮಾ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts