More

    ಸಂಕಷ್ಟ ಇದ್ದಾಗ ಉಳ್ಳವರು ಸಹಾಯ ಮಾಡಬೇಕು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮನವಿ

    ನೆಲಮಂಗಲ: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಜನರು ಸಂಕಷ್ಟಲದಲ್ಲಿದ್ದಾರೆ. ಅಂಥವರಿಗೆ ಉಳ್ಳವರು ಸಹಾಯ ಮಾಡಲು ಮುಂದಾಗಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ತಿಳಿಸಿದರು.

    ನಗರದ ಕೆರೆ ಬಾಗಿಲು ಶ್ರೀ ರಾಮ ಮಂದಿರದ ಸಭಾಂಗಣದಲ್ಲಿ ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಸ್. ಮಲ್ಲಯ್ಯ ನೇತೃತ್ವದಲ್ಲಿ ಮಂಗಳವಾರ ನಗರದ ಬಡ ಬ್ರಾಹ್ಮಣರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.

    ರಾಜ್ಯಾದ್ಯಂತ 7 ಲಕ್ಷಕ್ಕೂ ಹೆಚ್ಚು ಬಡ ಬ್ರಾಹ್ಮಣ ಕುಟಂಬಗಳಿವೆ. ಇವರೆಲ್ಲರೂ ಮಠಗಳಲ್ಲಿ, ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನೇರವೇರಿಸುತ್ತಾ ಜೀವನ ನಡೆಸುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪ್ರರು ಸ್ವಾಭಿಮಾನಿಗಳಾಗಿದ್ದು ಯಾರೊಬ್ಬರಿಂದಲೂ ಸಹಾಯ ಬಯಸುವುದಿಲ್ಲ. ಅದ್ದರಿಂದ ಸ್ಥಳಿಯರ ಸಹಯೋಗದಲ್ಲಿ ಇದುವರೆಗೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ ಎಂದರು.

    ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಸ್. ಮಲ್ಲಯ್ಯ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದ ಬಡ ಕುಟುಂಬಗಳು ಸಂಕಷ್ಟದಲ್ಲಿವೆ. ದೇವರ ಸೇವೆ ಮಾಡುತ್ತಾ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಬ್ರಾಹ್ಮಣರು ಸಂಕಷ್ಟಕ್ಕೆ ಒಳಗಾಗಿರುವುದು ಬೇಸರದ ಸಂಗತಿ. ಅದ್ದರಿಂದ 100ಕ್ಕೂ ಹೆಚ್ಚು ಬಡ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.

    ತಾಲೂಕು ಬ್ರಾಹ್ಮಣ ಸಭಾ ಉಪಾಧ್ಯಕ್ಷ ರಾಘವೇಂದ್ರ ಶಾಸ್ತ್ರಿ, ಕಾರ್ಯದರ್ಶಿ ಬಿ.ಕೆ. ನಟರಾಜು, ಸಹಕಾರ್ಯದರ್ಶಿ ನಾಗಭೂಷಣ್, ಪುರೋಹಿತ ಹಾಗೂ ಆರ್ಚಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಭಟ್, ಕೆರೆ ಬಾಗಿಲು ಶ್ರೀರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಎಸ್. ನಾಗಭೂಷಣ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts