More

    ಸಂಕಟದ ಸಮಯದಲ್ಲಿ ರಾಜಕಾರಣ ತರವಲ್ಲ

    ಗದಗ: ರಾಜ್ಯ ರಾಜಕಾರಣದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಕೋವಿಡ್ ಸಂಕಟದ ಸಮಯದಲ್ಲಿ ರಾಜಕಾರಣ ಮಾಡಬಾರದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದರು. ಕೋವಿಡ್ ಸೋಂಕು ಸಮಾಜದಲ್ಲಿ ತೀವ್ರ ಅತಂಕ ಸೃಷ್ಟಿಸಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ತರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಿಜೆಪಿಯಲ್ಲಿ ಪ್ರಮುಖ ಸ್ಥಾನಮಾನ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಪ್ರಮೋದ ಮುತಾಲಿಕ, ರಾಜಕೀಯ ಪ್ರವೇಶ ಮಾಡುವ ಆಸೆ ಇತ್ತು. ರಾಜಕೀಯ ಅಧಿಕಾರದಿಂದ ಹಿಂದುತ್ವಕ್ಕೆ ಬಲ ತುಂಬೋದು ನನ್ನ ಅಜೆಂಡಾ ಆಗಿತ್ತು. ಆದರೆ, ಆಸೆ ಈಡೇರಲಿಲ್ಲ. ಇವತ್ತಿನ ರಾಜಕಾರಣದಲ್ಲಿ ಭ್ರಷ್ಟರು, ದುಷ್ಟರು, ದರೋಡೆ- ಲೂಟಿಕೋರರು, ತುಂಬಿಕೊಂಡಿದ್ದಾರೆ. ನಮ್ಮಂತಹ ಪ್ರಾಮಾಣಿಕ, ಹಿಂದುವಾದಿ ಹೋರಾಟಗಾರು ಬೇಡವಾಗಿದೆ. ಹೀಗಾಗಿ ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

    ಸೋನಿಯಾ ಆಡಳಿತವಲ್ಲ: ಚೀನಾ ಜತೆಗಿನ ಯುದ್ಧಕ್ಕೆ ಭಾರತ ಸಿದ್ಧತೆಯಲ್ಲಿದ್ದು, ನರೇಂದ್ರ ಮೋದಿ ಸರ್ಕಾರ ಸಕಲ ಸನ್ನದ್ಧವಾಗಿದೆ. ಕೇಂದ್ರದಲ್ಲಿ 56 ಇಂಚು ಎದೆಯ ಪ್ರಧಾನಮಂತ್ರಿ ಇದ್ದಾರೆ. ಇದು ಸೋನಿಯಾ ಕಾಂಗ್ರೆಸ್ ಆಡಳಿತವಲ್ಲ ಎಂದು ಮುತಾಲಿಕ್ ಹೇಳಿದರು. ಇತಿಹಾಸದಲ್ಲಿ ನಾವಾಗಿಯೇ ಆಕ್ರಮಣ ಮಾಡಿದ ಉದಾಹರಣೆ ಇಲ್ಲ. ಆದರೆ, ಎದುರಾಳಿಗಳ ಆಕ್ರಮಣಕ್ಕೆ ನಾವು ಉತ್ತರ ಕೊಡುತ್ತ ಬಂದಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts