More

    ಷೇರುದಾರರ ರಕ್ಷಣೆಗೆ ಬದ್ಧ

    ರಾಮದುರ್ಗ: ಷೇರುದಾರರು ಕಷ್ಟ ಕಾಲದಲ್ಲಿ ಕಾರ್ಖಾನೆಗೆ ಹಣ ನೀಡಿದ್ದಾರೆ. ಅವರ ಋಣ ತೀರಿಸಲು ಆಡಳಿತ ಮಂಡಳಿ ಶ್ರಮಿಸಲಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ರೈತರು, ಕಾರ್ಖಾನೆ ಲೀಜ್ ಪಡೆದ ಇಐಡಿ ಪ್ಯಾರಿ ಕಂಪನಿಯ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದ್ದಾರೆ.

    ತಾಲೂಕಿನ ಖಾನಪೇಠ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವ ಸದಸ್ಯರ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತ ಮುಖಂಡರು ಹೆಚ್ಚಿನ ಬೆಲೆಗೆ ಒತ್ತಾಯಿಸುವುದು ತಪ್ಪಲ್ಲ. ಪ್ಯಾರಿ ಕಂಪನಿ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಷೇರುದಾರರು ಹಾಗೂ ರೈತರಿಗೆ ಕಾರ್ಖಾನೆಯಿಂದ ಮೋಸವಾಗದಂತೆ ಆಡಳಿತ ಮಂಡಳಿ ಕ್ರಮವಹಿಸಲಿದೆ ಎಂದು ಅಭಯ ನೀಡಿದರು.

    ಕೆಲ ರೈತ ಮುಖಂಡರು ಕಳೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಸತ್ತವರು, ಜೈಲಿಗೆ ಹೋದವರ ಹೆಸರುಗಳಿವೆ. ಆದರೆ, ಸಭೆಗೆ ಹಾಜರಾದರೂ ಕೆಲವರ ಹೆಸರು ಮತದಾರರ ಪಟ್ಟಿಯಲ್ಲಿ ಬಂದಿಲ್ಲ. ಪ್ಯಾರಿ ಕಂಪನಿಯವರು ಕಬ್ಬಿಗೆ ಎ್ಆರ್‌ಪಿ ದರ ನೀಡುವಲ್ಲಿ ಮೋಸ ಮಾಡುತ್ತಿದ್ದಾರೆ. ಎಚ್‌ಎನ್‌ಟಿ ಹಣವನ್ನು ಹೆಚ್ಚು ಕಡಿತಗೊಳಿಸುತ್ತಿದ್ದಾರೆ. ಅದನ್ನಾದರೂ ಮರಳಿಸಬೇಕು. 2,529 ರೂ. ಬದಲಿಗೆ ನೆರೆ ಹೊರೆಯ ಕಾರ್ಖಾನೆಯವರು ಕೊಡುವ ಮೊತ್ತ ನೀಡಬೇಕು ಎಂದು ರೈತರು ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರನ್ನು ಪ್ರಶ್ನಿಸಿದರು. ತದನಂತರ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ರೈತರು ಕಾರ್ಖಾನೆ ಎಂ.ಡಿ. ಹಾಗೂ ಅಧ್ಯಕ್ಷರು ಮಾತ್ರ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿರು. ಎಂ.ಡಿ. ಶಾಹೀನ್ ಅಖ್ತರ್ ನಾನು ಇತ್ತೀಚೆಗೆ ಚಾರ್ಜ್ ತೆಗೆದುಕೊಂಡಿದ್ದೇನೆ. ಎಲ್ಲವನ್ನೂ ಪರಿಶೀಲಿಸುವೆ ಎಂದು ಹೇಳಿದರೆ. ಅಧ್ಯಕ್ಷ ಮಲ್ಲಣ್ಣ ಯಾದವಾಡ ಶೀಘ್ರದಲ್ಲಿ ರೈತ ಮುಖಂಡರು ಹಾಗೂ ಪ್ಯಾರಿ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡುತ್ತಿದ್ದಂತೆ ವಾತಾವರಣ ತಿಳಿಗೊಂಡಿತು.

    ನಿರ್ದೇಶಕರಾದ ಅಡಿವೆಪ್ಪ ಸುರಗ, ಬಿ.ಎಂ.ತುಪ್ಪದ, ಐ.ಎಸ್.ಹರನಟ್ಟಿ, ಎಂ.ಎಂ.ಅತಾರ, ಎಸ್.ಜಿ.ಪಾಟೀಲ, ಟಿ.ಬಿ.ಪಾಟೀಲ, ದುಂಡಪ್ಪ ದೇವರಡ್ಡಿ, ಸುರೇಶ, ಸಿ.ಎಸ್.ರಜಪೂತ, ವೈ.ಐ.ಚಿಪ್ಪಲಕಟ್ಟಿ, ಬಿ.ವಿ.ಪಾಟೀಲ, ಎನ್.ಎಸ್.ಚಾಕಲಬ್ಬಿ, ಎನ್.ಟಿ. ಮುರಗೋಡ, ಎಸ್.ಬಿ.ಸೋಮಗೊಂಡ, ಬಾಳಪ್ಪ ಹಂಜಿ, ಎಸ್.ಆರ್.ಕರದಿನ, ವೃತ್ತಿಪರ ಸಲಹೆಗಾರ ಶಂಭು ಮಾಳವಾಡ, ಆಡಳಿತ ಮಂಡಳಿಯ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ವಿಜಯ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts