More

    ಶ್ರೀಶೈಲಾರಾಧ್ಯ ಅಪಾರ ಪಾಂಡಿತ್ಯ ಹೊಂದಿದ್ದರು

    ಚಿತ್ರದುರ್ಗ: ಜ್ಯೋತಿಷ್ಯ ಸೇರಿ ಅಪಾರ ಪಾಂಡಿತ್ಯ ಹೊಂದಿದ್ದ ಶ್ರೀಶೈಲ ಆರಾಧ್ಯರು ಉತ್ತಮ ವ್ಯಕ್ತಿತ್ವವುಳ್ಳವರೂ ಹೌದು ಎಂದು ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.

    ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಪ್ರೊ.ಶ್ರೀಶೈಲ ಆರಾಧ್ಯ ಆಭಿಮಾನಿಗಳ ಬಳಗದಿಂದ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆ.ಎಂ.ತಿಪ್ಪೇಸ್ವಾಮಿ, ಪ್ರೊ.ಶ್ರೀಶೈಲ ಆರಾಧ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಮ್ಮಲ್ಲಿನ ವಿದ್ವತ್ತನ್ನು ಬೇರೆಯವರಿಗೆ ಧಾರೆ ಎರೆಯುವ ಗುಣ ಆರಾಧ್ಯ ಅವರಲ್ಲಿತ್ತು. ಮೃತ ನಂತರವೂ ನೆನಪಿಸಿಕೊಳ್ಳುವಂತೆ ಸಮಾಜಕ್ಕೆ ಕೊಡುಗೆ ನೀಡುವ ಸಾಧಕರಾಗಲು ಮುಂದಾಗಬೇಕು. ಆಗ ಜೀವನ ಸಾರ್ಥಕ ಎಂದು ಸಲಹೆ ನೀಡಿದರು.

    ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಆರಾಧ್ಯ ಅವರು ಪ್ರಾಧ್ಯಾಪಕರಾಗಿ, ಇತಿಹಾಸ ಸಂಶೋಧಕರಾಗಿ, ಸಾಹಿತಿಗಳಾಗಿ ಬಹುಮುಖಿಯಾಗಿದ್ದರು. ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ಜನರ ಮನಸು ಗೆದ್ದ ಮರೆಯಲಾಗದ ವ್ಯಕ್ತಿತ್ವ ಎಂದು ಬಣ್ಣಿಸಿದರು.

    ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ, ಶ.ಮಂಜುನಾಥ್, ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಶ್ರೀಶೈಲ ಆರಾಧ್ಯ ಪತ್ನಿ ಉಮಾ, ಪುತ್ರಿ ರೋಹಿಣಿ, ಶೈಲೇಂದ್ರ ನಾಗರಾಜ್, ಎಸ್‌ಎನ್ ಟ್ರಸ್ಟ್‌ನ ಎಸ್.ಷಣ್ಮುಖಪ್ಪ, ನಿವೃತ್ತ ಶಿಕ್ಷಕ ನಾಗರಾಜ್, ಶಾರದ ಬ್ರಾಸ್‌ಬ್ಯಾಂಡ್ ಮಾಲೀಕ ಎಸ್.ವಿ.ಗುರುಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts