More

    ಶ್ರೀವಾರಿ ಫೌಂಡೇಶನ್ನಿಂದ ಶ್ರೀನಿವಾಸ ಕಲ್ಯಾಣ

    ಯಾದಗಿರಿ: ಬೆಂಗಳೂರಿನ ಅನುಗ್ರಹ ಫೌಂಡೇಶನ್ ವತಿಯಿಂದ ನಗರದ ಹೊರ ವಲಯದಲ್ಲಿನ ರಾಚೋಟ್ಟಿ ವೀರಣ್ಣ ದೇವಸ್ಥಾನ ಸಮೀಪ ಅ.26ರಂದು ಸಂಜೆ 4 ಗಂಟೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ನೂತನ ಮಠದ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದ್ದು, ಅನುಗೃಹ ಕ್ಷೇತ್ರದಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿವೆ.

    ಸುಮಾರು 1 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಈಗಾಗಲೇ ಬೃಹತ್ ಗಾತ್ರದ ವೇದಿಕೆ ನಿಮರ್ಾಣ ಮಾಡಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪಂಡಿತರು ಬುಧವಾರ ಸಂಜೆಯೇ ನಗರಕ್ಕೆ ಆಗಮಿಸಿದ್ದಾರೆ. ಕುಡಿಯುವ ನೀರು ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರಯಲಾಗಿದೆ.

    ಸಂಜೆ 7ರಿಂದ 10ರ ವರೆಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನೆರವೇರಿಸಲಾಗುವುದು. ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೆರವೇರಿಸಲಿದ್ದಾರೆ. ಅಬ್ಬೆತುಮಕೂರಿನ ಡಾ.ಗಂಗಾಧರ ಮಹಾಸ್ವಾಮಿಗಳು ಹಾಗೂ ಮೈಸೂರಿನ ಯೋಗ ನರಸಿಂಹ ದೇವಸ್ಥಾನ ಸಂಸ್ಥಾನದ ಡಾ.ಭಾಶ್ಯಂ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಡಾ.ಅಜಯ್ಸಿಂಗ್, ಅಲ್ಲಂಪ್ರಭು ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ, ಎಂಎಲ್ಸಿ ಶಶೀಲ್ ನಮೋಶಿ, ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ಅಸಗೋಡು ಜಯಸಿಂಹ, ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್, ಅಪ್ಪುಗೌಡ ಪಾಟೀಲ್ ಆಗಮಿಸಲಿದ್ದಾರೆ ಹೆಚ್ಚಿನ ಪ್ರಮಾಣದಲ್ಲಿ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಫೌಂಡೇಶನ್ ಟ್ರಸ್ಟಿ ಗುರುರಾಜ ಚಿತ್ತಾಪುರಕರ್ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts