More

    ಶ್ರೀರಾಮಕೃಷ್ಣ ತೀರ್ಥಕ್ಷೇತ್ರದಲ್ಲಿ ವಿಶೇಷ ಪೂಜೆ; ಶೇಷಾಚಲ ಶ್ರೇಣಿಗಳ ಕಾಡಿನಲ್ಲಿ ಭಕ್ತರ ದಂಡು 6 ಕಿಮೀವರೆಗೆ ಕಾಲ್ನಡಿಗೆ ಸೇವೆ

    ತಿರುಮಲ: ಮಾಘ ಪೌರ್ಣಮಿ ಹಿನ್ನಲೆಯಲ್ಲಿ ತಿರುಮಲದ ಶೇಷಚಲಾ ಶ್ರೇಣಿಗಳ ಕಾಡಿನಲ್ಲಿರುವ ರಾಮಕೃಷ್ಣ ತೀರ್ಥ ಸನ್ನಿಧಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

    ಅರಣ್ಯವಾಸಿಗಳು ಹಾಗೂ ಕಾಡುಪ್ರಾಣಿಗಳ ನಡುವೆ ಯಾವುದೇ ಸಂಘರ್ಷ ನಡೆಯದಂತೆ ಸೌಹಾರ್ದ ಜೀವನ ನಡೆಸಲು ಅನುಕೂಲವಾಗುವಂತೆ ಮಹರ್ಷಿ ಶ್ರೀ ರಾಮಕೃಷ್ಣರು ಉತ್ತಮ ವಾತಾವರಣ ನಿರ್ಮಿಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಮೂರ್ತಿಗಳಿಗೆ ಪ್ರತಿವರ್ಷ ಮಾಘ ಪೌರ್ಣಮಿಯಂದು ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.

    ಶ್ರೀವಾರಿ ದೇವಸ್ಥಾನದ ಅರ್ಚಕರು ಪೂಜಾ ಸಾಮಗ್ರಿಗಳೊಂದಿಗೆ ತಿರುಮಲದಿಂದ 6 ಕಿಮೀ ದೂರದಲ್ಲಿರುವ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಶ್ರೀರಾಮ ಹಾಗೂ ಶ್ರೀಕೃಷ್ಣನ ವಿಗ್ರಹಗಳಿಗೆ ವಿಶೇಷ ಪೂಜೆ ಕೈಂಕರ್ಯ ನೆರವೇರಿಸಿದರು.

    ಪೂಜೆಗೆ ಆಗಮಿಸುವ ಭಕ್ತರಿಗೆ ಮೊಸರನ್ನ, ಪುಳಿಯೊಗರೆ, ಮಜ್ಜಿಗೆ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮಕೃಷ್ಣ ತೀರ್ಥದಲ್ಲಿ ಆರೋಗ್ಯ ಶಿಬಿರ ಹಾಗೂ ಭಕ್ತರು ಹೋಗಿ ಬರಲು ಅಗತ್ಯ ಸಂಪರ್ಕ ಸಾಧನಗಳ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts