More

    ಶ್ರೀಮಠವಾಗಲಿ ಕಲ್ಯಾಣದ ಸಿದ್ಧಗಂಗೆ

    ಯಾದಗಿರಿ: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಮಠಗಳು ತ್ರೀವಿಧ ದಾಸೋಹ ಮಾಡುವ ಮೂಲಕ ಜನಸಾಮಾನ್ಯರ ನೋವಿಗೆ ಸ್ಪಂದಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧರಡ್ಡಿ ತಿಳಿಸಿದರು.
    ಮಂಗಳವಾರ ರಾತ್ರಿ ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿನ ಶ್ರೀ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವದ ನಂತರ ಜರುಗಿದ ಧರ್ಮ ಸಂಸ್ಕೃತಿ ಉತ್ಸವ ಸಭೆ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳಲ್ಲಿ ಸಾಮರಸ್ಯ ಮೂಡಬೇಕಾದರೆ ಮಠ-ಮಂದಿರಗಳಿಂದ ಮಾತ್ರ ಸಾಧ್ಯ. ಅನಾದಿ ಕಾಲದಿಂದಲೂ ಸಮಾಜದಲ್ಲಿ ಮಠಗಳು ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ ಎಂದರು.
    ಶ್ರೀಮಠದ ಪೀಠಾಪತಿಗಳು ವಯಸ್ಸಿನಲ್ಲಿ ಕಿರಿಯರಿದ್ದರೂ ಅಗಾಧವಾದ ಪಾಂಡಿತ್ಯ ಹೊಂದಿದ್ದಾರೆ. ಅವರ ದೂರದೃಷ್ಠಿಯಂದ ಹೆಡಗಿಮದ್ರಾ ಗ್ರಾಮ ಇಂದು ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತಿದೆ. ಭಕ್ತರು ಮಠದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುವ ಅಗತ್ಯವಿದೆ. ಈ ಮಠ ಕಲ್ಯಾಣ ಭಾಗದ ಸಿದ್ಧಗಂಗಾ ಕ್ಷೇತ್ರವಾಗಲಿ ಎಂದು ಆಶಿಸಿದರು.
    ಗುರುಮಠಕಲ್ ಜೆಡಿಎಸ್ ನಿಯೋಜಿತ ಅಭ್ಯಥರ್ಿ ಶರಣಗೌಡ ಕಂದಕೂರ ಮಾತನಾಡಿ, ಶ್ರೀಗಳು ತಮ್ಮ ಅತ್ಯಂತ ಸಣ್ಣ ವಯಸ್ಸಿನಲ್ಲಿ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ ಶಿಕ್ಷಣ ಸಂಸ್ಥೆ ಕಟ್ಟಬೇಕೆಂಬ ಅವರ ಹಂಬಲ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
    ಹಾಪ್ಕಾಮ್ಸ್ ನಿದರ್ೇಶಕ ರಾಚನಗೌಡ ಮುದ್ನಾಳ್ ಪ್ರಾಸ್ತಾವಿಕ ಮಾತನಾಡಿದರು. ಶ್ರೀಶಾಂತ ಮಲ್ಲಿಕಾಜರ್ುನ ಪಂಡಿತಾರಾಧ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯರು, ದೇವಾಪುರದ ಶ್ರೀಶಿವಮೂತರ್ಿ ಶಿವಾಚಾರ್ಯರು, ಹಲಕಟರ್ಿಯ ಮುನೀಂದ್ರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶೀವಾಚಾರ್ಯರು, ದಂಡಗುಂಡದ ಸಂಗಮನ ಬಸವ ಶಿವಾಚಾರ್ಯರು, ಶ್ರೀ ಸಿದ್ಧರೇಣುಕಾ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
    ಪ್ರಮುಖರಾದ ಜೆ.ಲಲ್ಲೇಶರಡ್ಡಿ, ರಾಮರಡ್ಡಿ ತಂಗಡಗಿ, ಡಾ.ಸಿಎಂ ಪಾಟೀಲ್, ಬಸವರಾಜಪ್ಪಗೌಡ ನರಬೋಳಿ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ್, ಶಿವಲಿಂಗರಡ್ಡಿ ಬೆನಕನಹಳ್ಳಿ, ರೇವಣಸಿದ್ದಯ್ಯಾ ಸ್ವಾಮಿ ಸನ್ನತಿ, ಬಾಬುಗೌಡ ಅಗತೀರ್ಥ, ಇದ್ದರು.
    ಗಿರೀಶ ಪಾಟೀಲ್ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts