More

    ಜ.21 ದಾಸೋಹ ದಿನ: ಸಿದ್ಧಗಂಗೆಯ ಶಿವಕುಮಾರ ಶ್ರೀಗಳ ಪುಣ್ಯಸ್ಮರಣಾರ್ಥ ಸರ್ಕಾರದಿಂದ ಅಧಿಕೃತ ಘೋಷಣೆ

    ತುಮಕೂರು: ಸಿದ್ಧಗಂಗೆಯ ಕಾಯಕಯೋಗಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

    2019ರ ಜ.21ರಂದು ಶಿವಕುಮಾರ ಶ್ರೀಗಳು ಶಿವಸಾನ್ನಿಧ್ಯ ಸೇರಿದ್ದು, 111 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಶ್ರೀಗಳು ಲಕ್ಷಾಂತರ ಬಡಮಕ್ಕಳಿಗೆ ಅನ್ನ, ಶಿಕ್ಷಣ, ಆಶ್ರಯ ಕಲ್ಪಿಸಿ ತ್ರಿವಿಧ ದಾಸೋಹಿ ಎನಿಸಿದ್ದರು. ಕಾಯಕ-ದಾಸೋಹ ಮಹತ್ವವನ್ನು ಸಾಧಿಸಿ ತೋರಿದ ಸಿದ್ಧಗಂಗಾ ಮಠದ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ದಿನವಾದ ಜ.21 ಅನ್ನು ‘ದಾಸೋಹ ದಿನ’ವನ್ನಾಗಿ ಘೋಷಿಸುವಂತೆ ರಾಜ್ಯಾದ್ಯಂತ ಕೂಗು ಕೇಳಿಬಂದಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ‘ದಾಸೋಹ‌‌ ದಿನ’ ಘೋಷಣೆ ಮಾಡಿದ್ದರು. ಇದೀಗ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ದಿನವನ್ನು ‘ದಾಸೋಹ ದಿನ’ವನ್ನಾಗಿ ಘೋಷಿಸುವಂತೆ ಶಿವಗಂಗೆಯ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀಗಳ ಪ್ರಥಮ ಪುಣ್ಯಸ್ಮರಣೆ ದಿನ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು.

    ಶ್ರೀಗಳ 2ನೇ ಪುಣ್ಯ ಸಂಸ್ಮರಣೋತ್ಸವ ಸಂದರ್ಭದಲ್ಲಿ ‘ದಾಸೋಹದಿನ’ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ಅಭಿಯಾನ ರಾಜ್ಯದೆಲ್ಲೆಡೆ ವ್ಯಾಪಕವಾಗಿ ನಡೆದಿತ್ತು. ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ರಾಜ್ಯ ಯುವ ವಿಭಾಗ, ವೀರಶೈವ ಲಿಂಗಾಯತ ಯುವ ವೇದಿಕೆ, ಕನ್ನಡಪರ ಸಂಘಟನೆಗಳು, ವಿವಿಧ ಜಿಲ್ಲೆಯಲ್ಲಿರುವ ಶ್ರೀಮಠದ ಹಳೆಯ ವಿದ್ಯಾರ್ಥಿ ಸಂಘಟನೆಗಳು ದಾಸೋಹ ದಿನ ಅಭಿಯಾನಕ್ಕೆ ದೊಡ್ಡಮಟ್ಟದ ಧ್ವನಿಗೂಡಿಸಿದ್ದರು.

    ಕೋವಿಡ್​ಗೆ ಬಲಿಯಾದ ತಂದೆ ಸಮಾಧಿ ಬಳಿ ಬರ್ತ್​ ​ಡೇ ಆಚರಿಸಿಕೊಂಡ ಬಾಲಕಿ! ಅಪ್ಪಾ ಕೇಕ್​ ತಿನ್ನಪ್ಪಾ…

    ಹು-ಧಾ ಪಾಲಿಕೆ ಚುನಾವಣೆ: ಕರ್ತವ್ಯನಿರತ ಪೇದೆ ದುರಂತ ಸಾವು! ಬಿಕ್ಕಿಬಿಕ್ಕಿ ಅಳುತ್ತಲೇ ಶವ ತೆಗೆದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts