More

    ಶ್ರೀಗಂಧ ಬೆಳೆದು ಆರ್ಥಿಕವಾಗಿ ಸಬಲರಾಗಿ


    ಯಾದಗಿರಿ: ರಾಜ್ಯದ ಅತಿ ಶ್ರೇಷ್ಠವಾದ ಮರ ಶ್ರೀಗಂಧ ಬೆಳೆಯುವ ಮೂಲಕ ರೈತರು ತಮ್ಮ ಆಥರ್ಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಕಾರಿ ಅಮರೇಶ ನಾಯ್ಕ್ ಸಲಹೆ ನೀಡಿದರ

    ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಪಂ, ಸಾಮಾಜಿಕ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಅಖಿಲ ಕನರ್ಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಸಹಯೋಗದಡಿ ಏರ್ಪಡಿಸಿದ್ದ ಶ್ರೀಗಂಧ ಮರ ಆಧಾರಿತ ಕೃಷಿ ಅರಣ್ಯ ಮಾದರಿಗಳ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ಸ್ಯಾಂಡಿಲ್ ಮರಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯದ ಮೂಲ ಹೆಚ್ಚಿಸಿಕೊಳ್ಳಬೇಕು. ಆಥರ್ಿಕವಾಗಿ ಸಬಲರಾಗಲು ಇದು ಅನುಕೂಲವಾಗಲಿದೆ ಎಂದರು.

    ಕಲಬುರಗಿ ಅರಣ್ಯ ಸಂರಕ್ಷಣಾಕಾರಿ ಎಸ್.ವೆಂಕಟೇಶನ್, ಗಂಧದ ಮರದಲ್ಲಿ ಅತ್ಯಕ ವರಮಾನವನ್ನು ಪಡೆಯಬಹುದಾಗಿದದ್ದು, ಕನಿಷ್ಠ 15 ವರ್ಷಗಳ ನಂತರ ಮತ್ತು ಗರಿಷ್ಠ 100 ವರ್ಷಗಳವರೆಗೆ ಆದಾಯ ಸಿಗಲಿದೆ. 15 ವರ್ಷಗಳಿಂದ 30 ವರ್ಷಗಳವರೆಗೆ ಬಲಿತ ಮರಗಳಿಂದ ಹೆಚ್ಚು ವರಮಾನ ಬರಲಿದೆ. ಕಡಿತಲೆಗೆ ಪಕ್ವವಾಗಿರುವ ಮರಗಳ ಬಗ್ಗೆ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ದೃಢೀಕರಿಸಿಕೊಂಡರೆ ಉತ್ತಮ. ಸಾಮಾನ್ಯವಾಗಿ 5 ವರ್ಷ ಮೇಲ್ಪಟ್ಟ ಗಂಧದ ಮರಗಳ ಕಳ್ಳತನ ಆಗುವ ಸಾಧ್ಯತೆ ಇರುತ್ತದೆ. ಈ ಅವಯಲ್ಲಿ ಬೆಳೆಗಾರರು ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.

    ಗಂಧದ ಮರಗಳ ಸುರಕ್ಷತೆ ಜೈವಿಕ ಬೇಲಿ, ಸಾಮಾಜಿಕ ಬೇಲಿ, ಸಿಸಿ ಕ್ಯಾಮರಾ, ರಾತ್ರಿ ವೇಳೆ ಕಾವಲುಗಾರ ವ್ಯವಸ್ಥೆ ಮಾಡಿಕೊಳ್ಳಬೇಕು. ಮರಗಳ ಕಳ್ಳತನ ಮಾಡಿದ ಕಳ್ಳರು ಪತ್ತೆಯಾದಲ್ಲಿ ಅವರ ವಿವರಗಳನ್ನು ತಮ್ಮೊಡನೆ ಇಟ್ಟುಕೊಳ್ಳಬೇಕು. ಇದನ್ನೂ ಬೆಳೆಗಾರರ ಸಂಘಕ್ಕೂ ಮಾಹಿತಿ ನೀಡಬೇಕೆಂದರು. ಹೇಳಿದರು.
    ಬೆಳೆಗಾರರ ಸಂಘದ ಅಧ್ಯಕ್ಷ ಪ್ರೇಮ ಅಮರನಾರಾಯಣ ಮಾತನಾಡಿ, ಯಾವುದೇ ವ್ಯಕ್ತಿ 4 ಕೆಜಿಗಿಂತ ಹೆಚ್ಚಾಗಿ ಗಂಧವನ್ನು ಇಟ್ಟುಕೊಂಡರೆ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ. ಇದು ಶಿಕ್ಷಾರ್ಹ ಅಪರಾಧ ಕೂಡಾ ಆಗಿದೆ ಎಂದು ಹೇಳಿದರು.
    ಇಲಾಖೆಯ ಉಪ ಅರಣ್ಯ ಸಂರಕ್ಷಣಾಕಾರಿ ಎನ್ಕೆ ಬಗಾಯತ್, ಬೆಳೆಗಾರರ ಸಂಘದ ಗೌರವ ಉಪಾಧ್ಯಕ್ಷ ಯು.ಶರಣಪ್ಪ, ಜಂಟಿ ಕೃಷಿ ನಿದರ್ೇಶಕ ಅಬೀದ್.ಎನ್.ಎಸ್., ತೋಟಗಾರಿಕೆ ಇಲಾಖೆ ಉಪ ನಿದರ್ೇಶಕರು ಸಂತೋಷ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts