More

    ಶ್ರಮಿಕರ ಏಳಿಗೆಗೆ ಶ್ರಮಿಸುವೆ

    ಗದಗ: ಮೊದಲು ಬಿಜೆಪಿ ಕಾರ್ಯಕರ್ತನಾಗಿ, ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ಕೆಲ ಕಾರಣಗಳಿಂದ ಕಮಲ ಬಿಟ್ಟು ಕಾಂಗ್ರೆಸ್​ಗೆ ಹೋಗಿದ್ದೆ. ಆದರೆ, ಕಾಂಗ್ರೆಸ್​ನಲ್ಲಿನ ಆಂತರಿಕ ಕಲಹ ಹಾಗೂ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಹಿರಂಗ ಕಿತ್ತಾಟ ನೋಡಿ ಸುಮ್ಮನೆ ಕೂಡಲಾಗದೆ ಮಾತೃ ಪಕ್ಷಕ್ಕೆ ಮರಳಿದ್ದೇನೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂಡಿಸಲು ಅಳಿಲು ಸೇವೆ ಸಲ್ಲಿಸಿದ್ದೇನೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ನನ್ನ ಕ್ಷೇತ್ರದ ಜನ ನನ್ನನ್ನು ಭಾರಿ ಬಹುಮತದಿಂದ ಮತ್ತೆ ಶಾಸಕನಾಗಿ ಆರಿಸಿ ಕಳಿಸಿದ್ದಾರೆ. ಈಗ ಪಕ್ಷವು ನನಗೆ ಸಚಿವ ಸ್ಥಾನ ನೀಡಿ ಜವಾಬ್ದಾರಿ ನೀಡಿದ್ದು ಶ್ರಮಿಕ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತೇನೆ. ಕಾರ್ವಿುಕ ಇಲಾಖೆಯಿಂದ ಜಿಲ್ಲೆಯಲ್ಲಿ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿ ಕಾರ್ವಿುಕ ವರ್ಗಕ್ಕೆ ಒಂದು ಗೌರವಯುತ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತೇನೆ’ ಎಂದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಪೊ›. ಎಸ್.ವಿ. ಸಂಕನೂರ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಮಾತನಾಡಿದರು. ಶಾಸಕ ರಾಮಣ್ಣ ಲಮಾಣಿ, ಪದಾಧಿಕಾರಿಗಳಾದ ಮಾಧವ ಗಣಾಚಾರಿ, ಮುತ್ತಣ್ಣ ಲಿಂಗನಗೌಡ್ರ, ಮಂಜುನಾಥ ಮೆಣಸಗಿ, ಮಹಾಂತೇಶ ನಾಲ್ವಾಡ, ದೇವೆಂದ್ರಪ್ಪ ಗೊಟೂರ, ಸುಧೀರ ಕಾಟಿಗರ, ಮಾಧುಸಾ ಮೇರವಾಡೆ, ಸುರೇಶ ಚಿತ್ತರಗಿ, ಮಹಾಂತೇಶ ಮಡಿವಾಳರ, ಮಹಾಂತೇಶ ನಲವಡಿ, ಶಿವು ಹಿರೇಮನಿ ಪಾಟೀಲ, ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ತೋಟೊಸಾ ಭಾಂಡಗೆ, ಶಂಕರ ಕರಿಬಿಷ್ಠಿ, ಕೆ.ಕೆ. ಮಳಗೌಡ್ರ, ಮೋಹನ ಮಾಳಗಿಮನಿ, ವೆಂಕಟೇಶ ಹಬೀಬ, ಆನಂದ ಶ್ಯಾವಿ, ರಾಜು ಹೊಸಮಠ, ಮಂಜು ಪಾಟೀಲ, ಸಿದ್ದು ಪಲ್ಲೇದ, ರಾಜು ರೊಟ್ಟಿ, ಸುರೇಶ ಮಗದುಮ್ ಮಹೇಶ ದಾಸರ, ಹನುಮಂತಪ್ಪ ಅಳವಂಡಿ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts