More

    ಶ್ರದ್ಧಾ ಭಕ್ತಿಯಿಂದ ಗಣೇಶನಿಗೆ ವಿದಾಯ

    ಲಕ್ಷೆ್ಮೕಶ್ವರ: ಪಟ್ಟಣದ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಐದು ದಿನಗಳಿಂದ ಪ್ರತಿಷ್ಠಾಪಿಸಿ ಆರಾಧಿಸಲ್ಪಟ್ಟ ಗಜಾನನ ಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ಭಾನುವಾರು ವಿಸರ್ಜನೆ ಮಾಡಲಾಯಿತು.
    ಭಾವಸಾರ ಕ್ಷತ್ರೀಯ ಸಮಾಜದವರು ಹಾಗೂ ಅಂಬಾ ಭವಾನಿ ದೇವಸ್ಥಾನದಲ್ಲಿ ಎಸ್​ಎಸ್​ಕೆ ಸಮಾಜದವರು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದಂತೆ ಸಂಪ್ರದಾಯಬದ್ಧವಾದ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ದೇವಸ್ಥಾನದ ಆವರಣದಲ್ಲಿ ಭಕ್ತಿ ಗೀತೆ, ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 5ನೇ ದಿನ ಗಣೇಶ ಮೂರ್ತಿ ಸಂಪ್ರದಾಯಬದ್ಧವಾಗಿ ವಿಸರ್ಜನೆ ಮಾಡಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
    ಮಧ್ಯಾಹ್ನ ವೇಳೆ ಮೂರ್ತಿ ಮೆರವಣಿಗೆ ಸಾಗುತ್ತಿರುವಾಗ ಎರಡು ಸಮಾಜದ ನೂರಾರು ಜನರು ಯಾವುದೇ ಸದ್ದುಗದ್ದಲವಿಲ್ಲದೆ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಹಿಳೆಯರು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಲಾಗಿ ಶಿಸ್ತಿನ ಶಿಪಾಯಿಗಳಂತೆ ತಾಳ ತಂಬೂರಿ ಹಿಡಿದು ಫಂಡರಿ ಸಂಪ್ರದಾಯದಂತೆ ವಿಷ್ಣು-ಹರಿನಾಮ ಭಜನೆ ಮಾಡುತ್ತಾ ಸಾರ್ವಜನಿಕರ ಗಮನ ಸೆಳೆದರು.
    ಉಭಯ ಸಮಾಜ ಬಾಂಧವರು ಕುಟುಂಬ ಸಮೇತ ವಿಶೇಷವಾಗಿ ಗಣೇಶ ವಿಸರ್ಜನೆ ಮಾಡಿ ಮಾದರಿಯಾಗಿದ್ದಾರೆ. ಆಧುನಿಕತೆಯ ಅಬ್ಬರದಲ್ಲಿಯೂ ಸಂಪ್ರದಾಯವನ್ನು ಉಳಿಸಿಕೊಳ್ಳಬಹುದು ಎನ್ನುವದಕ್ಕೆ ಇಂದಿನ ಈ ಗಣೇಶ ವಿಸರ್ಜನೆ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಸಿಪಿಐ ವಿಕಾಸ ಲಮಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.
    ಮೆರವಣಿಗೆಯುದ್ದಕ್ಕೂ ವಿಷ್ಣು-ಹರಿನಾಮ ಸ್ಮರಣೆ, ಗಣನಾಯಕನ ಜಯಘೊಷಗಳು ಹೊರತು ಯಾವುದೇ ಘೊಷಣೆಗಳು ಮೊಳಗಲಿಲ್ಲ. ನಾರಾಯಣಸಾ ಪವಾರ, ಆನಂದ ಬದಿ, ಕಿರಣ ನಾಯಕ, ಪ್ರವೀಣ ಬೋಮಲೆ, ಸಂತೋಷ ಸರ್ವದೆ, ಮನೋಹರ ಬಸವಾ, ವಾಸು ಬೋಮಲೆ, ಪುಂಡಲೀಕ ತಾಂದಳೆ, ಸೋಪಾನ ತಾಂದಳೆ, ಗೋವಿಂದ ಮಾಂಡ್ರೆ, ನಾರಾಯಣ ಬಿಸೆ, ಸತೀಶ ಮಾಂಡ್ರೆ, ವೆಂಕಟೇಶ ಮಾತಾಡ, ಖಂಡೋಬ ನವಲೆ, ರುಕ್ಮಿಣಿ ರಾಂಪುರೆ, ಲಕ್ಷ್ಮಣಸಾ ರಾಜೋಳಿ, ಯಲ್ಲಪ್ಪ ಬದಿ, ಗಣಪತಸಾ ಬದಿ, ತುಕಾರಾಮಸಾ ಬದಿ ಇತರರು ಇದ್ದರು.
    ಗಣಪತಿ ವಿಸರ್ಜನೆ ಎಂದರೆ ಅಲ್ಲಿ ಅಬ್ಬರದ ಡಿಜೆ ಸೌಂಡ್, ಮುಗಿಲು ಮುಟ್ಟುವ ಪಟಾಕಿ ಸದ್ದು, ಮನಸ್ಸಿನ ಹಿಡಿತ ತಪ್ಪಿ ಯರ್ರಾಬಿರ್ರಿ ಕುಣಿದು ಕುಪ್ಪಳಿಸುವುದು ಸಾಮಾನ್ಯ. ಆದರೆ, ಈ ಅರ್ಥವಿಲ್ಲದ ಆಚರಣೆ, ಆಡಂಭರ, ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಹಾಗೂ ಗಣೇಶೋತ್ಸವ ಸಂದರ್ಭದಲ್ಲಿ ಭಕ್ತಿ ಭಾವ ಮೇಳೈಸಬೇಕು ಎನ್ನುವ ಉದ್ದೇಶದಿಂದ ಭಾವಸಾರ ಕ್ಷತ್ರೀಯ ಸಮಾಜದವರು ಹಾಗೂ ಎಸ್​ಎಸ್​ಕೆ ಸಮಾಜದವರು ಕೈಗೊಂಡ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು. ಗಣೇಶ ಮೂರ್ತಿ ವಿಸರ್ಜನೆ ವೇಳೆ ದೇವತಾರಾಧನೆ, ಭಜನೆ, ಪ್ರಾರ್ಥನೆ, ಮಹಿಳೆಯರು ಹಾಗೂ ಮಕ್ಕಳ ಸಾಮೂಹಿಕ ನೃತ್ಯದೊಂದಿಗೆ ವಿಶೇಷವಾಗಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿರುವುದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts