More

    ಶೌಚಗೃಹ ನಿರ್ಮಿಸಿ, ನರಕಯಾತನೆ ತಪ್ಪಿಸಿ

    ಸೇಡಂ: ಬಯಲು ಶೌಚದಿಂದ ನರಕಯಾತನೆ ಅನುಭವಿಸುತ್ತಿದ್ದು, ಕೂಡಲೇ ಮಹಿಳಾ ಶೌಚಗೃಹ ನಿರ್ಮಿಸಬೇಕು ಎಂದು ಒತ್ತಾಯಿಸಿ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಹಿಳೆಯರು ಹಾಗೂ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಗ್ರಾಮದ ಮಹಿಳೆಯರು ಶೌಚಕ್ಕೆ ಬಯಲು ಪ್ರದೇಶವನ್ನೇ ಅವಲಂಬಿಸಬೇಕಾಗಿದೆ. ಮಳೆಗಾಲದಲ್ಲಂತೂ ಶೌಚಕ್ಕೆ ಹೋಗಲು ನರಕಯಾತನೆ ಅನುಭವಿಸಬೇಕಾಗಿದೆ. ಉಳ್ಳವರು ಮನೆಯಲ್ಲಿ ಶೌಚಗೃಹ ನಿರ್ಮಾಣ ಮಾಡಿಕೊಳ್ಳುತ್ತಾರೆ. ಆದರೆ ನಮಗೆ ಸರ್ಕಾರ ನೆರವು ನೀಡಿದರೂ ಶೌಚಗೃಹ ನಿರ್ಮಾಣ ಮಾಡಿಕೊಳ್ಳಲು ಸ್ಥಳವಿಲ್ಲ. ಹೀಗಾಗಿ ಕೂಡಲೇ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ರಾಮಲಿಂಗಮ್ಮ ಬೆಳಗುಂಪಿ, ನಿಂಗಮ್ಮ ತಳವಾರ, ಚಂದಮ್ಮ ದಂಡಗುಂಡ, ಮರೆಮ್ಮ ತೊಟ್ನಳ್ಳಿ, ಮರೆಮ್ಮ ತಳವಾರ, ದೇವಕ್ಕಿ ಕಾಬಾ, ಭೀಮವ್ವ ಕಾಕಲವಾರ, ಬಸಲಿಂಗ ಕಾಬಾ, ನಾಗರಾಜ ಪಾಪಳ್ಳಿ, ಮೌನೇಶ ತೊಟ್ನಳ್ಳಿ, ವಿಶ್ವ ಜೋಗಿ, ಅಯ್ಯಪ್ಪ ಮರಗಣಿ, ಮಲ್ಲಿಕಾರ್ಜುನ ದಂಡಗುಂಡ, ಸೂರಪ್ಪ ತಳವಾರ, ಯಲ್ಲಾಲಿಂಗ ಹಂದರಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts