More

    ಶೌಚಗೃಹ ಕೆಡವಿದವರ ವಿರುದ್ಧ ಕ್ರಮ ಕೈಗೊಳ್ಳಿ

    ಚಿಂಚೋಳಿ: ರೋಡ್‌ಕಲ್ಲೂರು ಗ್ರಾಮದಲ್ಲಿ ಶೌಚಗೃಹ ಕೆಡವಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ಭಾರತ ಮುಕ್ತಿ ಮೋರ್ಚಾದಿಂದ ಪ್ಲಾಸ್ಟಿಕ್ ಲೋಟ (ಚಂಬು) ಹಿಡಿದು ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಮೋರ್ಚಾದ ರಾಜ್ಯ ಸಂಚಾಲಕ ಮಾರುತಿ ಗಂಜಗೇರಾ ಮಾತನಾಡಿ, ರೋಡ್‌ಕಲ್ಲೂರು ಗ್ರಾಮದ ದಲಿತರ ಬಡಾವಣೆಯಲ್ಲಿ ನೆಲಸಮ ಮಾಡಿರುವ ಮಹಿಳಾ ಶೌಚಗೃಹ ಮರು ನಿರ್ಮಿಸಬೇಕು. ಕುಂಚಾವರಂ, ಚಿಮ್ಮನಚೋಡ, ಪಸ್ತಾಪುರ, ವೆಂಕಟಾಪುರ, ಗಡಿಕೇಶ್ವಾರ ಗ್ರಾಮಗಳ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು. ಕನಕಪುರ ಗ್ರಾಮ ಪಂಚಾಯಿತಿಯಲ್ಲಿ 2021/22, 2022/23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

    ರೋಡ್‌ಕಲ್ಲೂರಿನಲ್ಲಿ ದಲಿತರಿಗೆ ರುದ್ರಭೂಮಿ ಮಂಜೂರು ಮಾಡಬೇಕು. ಮಿರಿಯಾಣ, ಸೋಮನಿಂಗದಳ್ಳಿ, ಕೊಳ್ಳೂರ, ಐನೋಳ್ಳಿ, ಕುಪನೂರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಿಂದ ನಡೆಯುತ್ತಿದ್ದು, ಕಾಮಗಾರಿ ನಿಲ್ಲಿಸಿ ಗುತ್ತಿಗೆದಾರರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

    ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts