More

    ಶೋಷಿತರ ಸಮಾವೇಶಕ್ಕೆ ಕೋಟೆನಗರಿ ಸಜ್ಜು

    ಚಿತ್ರದುರ್ಗ: ಕೋಟೆನಗರಿಯಲ್ಲಿ ಜ.28ರಂದು ಹಮ್ಮಿಕೊಂಡಿರುವ ರಾಜ್ಯಮಟ್ಟದ ಶೋಷಿತರ ಜಾಗೃತಿ ಸಮಾವೇಶಕ್ಕೆ ಹೊರವಲಯದ ಮಾದಾರ ಗುರುಪೀಠ ಸಮೀಪದ 120 ಎಕರೆ ಜಾಗದಲ್ಲಿ ಕಳೆದೊಂದು ತಿಂಗಳಿನಿಂದಲೂ ಭರದ ಸಿದ್ಧತೆ ನಡೆಯುತ್ತಿದ್ದು, ಬೃಹತ್ ಪೆಂಡಾಲ್ ಸೇರಿ ಅಂತಿಮ ರೂಪುರೇಷೆ ಪಡೆದುಕೊಂಡು ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.

    ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟ, ರಾಜ್ಯ ಹಿಂದುಳಿದ ಸಮುದಾಯಗಳ ಒಕ್ಕೂಟದಿಂದ ಶೋಷಿತರೇ ಅತಿ ಹೆಚ್ಚಿರುವ ಚಿತ್ರದುರ್ಗದಲ್ಲಿ ಆಯೋಜಿಸಿರುವ ಸಮಾವೇಶಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆ ಆಯೋಜಕರು ಹೊಂದಿದ್ದು, 5 ಲಕ್ಷ ಆಸನಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಬೃಹತ್ತಾದ ಮುಖ್ಯ ವೇದಿಕೆಯಲ್ಲಿ 100 ಮಂದಿಗಷ್ಟೇ ಅವಕಾಶವಿದ್ದು, ಅಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಶೋಷಿತ ಸಮುದಾಯಗಳ ಸಚಿವರು, ಶಾಸಕರು ಆಸೀನರಾಗಲಿದ್ದಾರೆ.

    ಅಕ್ಕ-ಪಕ್ಕ ಎರಡರಲ್ಲೂ ತಲಾ 250 ಸೇರಿ ಮೂರು ವೇದಿಕೆಯಿಂದ 600 ಮಂದಿ ಆಸೀನರಾಗಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಶೋಷಿತ ಸಮುದಾಯಗಳ ರಾಜ್ಯದ ಎಲ್ಲ ಜಿಲ್ಲಾ ಅಧ್ಯಕ್ಷರು, ಮುಖಂಡರು, ಹಿಂದುಳಿದ-ಅತಿ ಹಿಂದುಳಿದ ವರ್ಗಗಳ ಮುಖ್ಯಸ್ಥರು, ಗಣ್ಯರಿಗೆ ಮಾತ್ರ ಇಲ್ಲಿ ಅವಕಾಶ ಇರಲಿದೆ.

    ಬಳ್ಳಾರಿ, ವಿಜಯನಗರ, ಕೊಪ್ಪಳ, ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿ 8 ಜಿಲ್ಲೆಯಿಂದಲೂ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, ಚಿತ್ರದುರ್ಗ, ದಾವಣಗೆರೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

    ಸಂಚಾರಿ ದಟ್ಟಣೆ ನಿಯಂತ್ರಿಸಲು ವಾಹನ ನಿಲುಗಡೆಗಾಗಿ ಪೆಂಡಾಲ್ ಪಕ್ಕ ವಿಐಪಿ, ವಿವಿಐಪಿ, ಮುಂಭಾಗ ಲಘು ವಾಹನ, ಸಾವಿರಾರು ಬಸ್‌ಗಳ ನಿಲುಗಡೆಗೆ ಮುರುಘಾಮಠದ ವ್ಯಾಪ್ತಿಗೊಳಪಡುವ ಜಾಗ, ಬಸವ ಪುತ್ಥಳಿ ಕಾಮಗಾರಿ ಸಮೀಪ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಧೂಳು ನಿಯಂತ್ರಿಸಲು ನೀರನ್ನು ಸಿಂಪಡಿಸಿ ಹದ ಮಾಡಲಾಗುತ್ತಿದೆ.

    ಸಿದ್ಧತೆ ಪರಿಶೀಲನೆ: ಮಾಜಿ ಸಚಿವ ಎಚ್.ಆಂಜನೇಯ, ಎಂಎಲ್ಸಿ ಎಂ.ಆರ್.ಸೀತಾರಾಮ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇತರರು ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಸಂಚಾಲಕ ಬಿ.ಟಿ.ಜಗದೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಪಾಷಾ, ಡಾ.ಬಿ.ತಿಪ್ಪೇಸ್ವಾಮಿ, ಆರ್.ಪ್ರಸನ್ನಕುಮಾರ್, ಹನುಮಂತಪ್ಪ ಭೋವಿ, ಕಂದಿಕೆರೆ ಸುರೇಶ್‌ಬಾಬು, ಆರ್.ನರಸಿಂಹರಾಜು, ಡಿ.ಕೆ.ಶಿವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts