More

    ಶೋಷಿತರ ಪರವಾಗಿ ನಿಲ್ಲುವುದೇ ಧರ್ಮ

    ಕೊಳ್ಳೇಗಾಲ: ಶೋಷಿತರು, ನೊಂದವರ ಪರವಾಗಿ ನಿಲ್ಲುವುದೇ ಧರ್ಮ. ಬಸವಣ್ಣ ಕೂಡ ಇದನ್ನೇ ಪ್ರತಿಪಾದಿಸಿದ್ದು. ಕಾಯಕ ಮಾಡುವವರೆಲ್ಲರೂ ಶ್ರೇಷ್ಠರು ಎಂಬುದನ್ನು ವಚನಕಾರರು ಹೇಳಿದ್ದಾರೆ. ಸವಿತಾ ಸಮಾಜ ಬಹಳ ಶ್ರಮಜೀವಿಗಳಾಗಿದ್ದರೆ ಎಂದು ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ತಿಳಿಸಿದರು.

    ನಗರದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಸಣ್ಣ ಸಮಾಜಗಳು ಸಂಘಟಿತವಾಗಿ ತಮ್ಮ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು. ನಮ್ಮಲ್ಲೆ ಗುಂಪುಗಳಾಗಬಾರದು. ಸವಿತಾ ಸಮಾಜಕ್ಕೆ ಸೇರಿದ ಹಡಪದ ಅಪ್ಪಣ್ಣ ಬಸವಣ್ಣನ ಅಪ್ತ ಸಹಾಯಕ ರಾಗಿದ್ದರು. ಅವರ ಬದ್ಧತೆ ಮತ್ತು ಪ್ರಾಮಾಣಿಕತೆ ಬಸವಣ್ಣನಿಗೆ ಇಷ್ಟವಾಗಿತ್ತು. ಇಂತಹ ಸಮಾಜದಲ್ಲಿ ಹುಟ್ಟಿರುವ ನೀವೇ ಶ್ರೇಷ್ಠರು ಎಂದರು.

    ರಾಜಕಾರಣಿಗಳು ಮಾತು ಕೊಟ್ಟಂತೆ ನಡೆದುಕೊಳ್ಳುವುದಿಲ್ಲ. ಚುನಾವಣೆ ಸನ್ನಿಹಿತವಾಗುತ್ತಿದೆ. ಯಾರಿಗೆ ಮತ ನೀಡಬೇಕು ಎಂಬ ಬಗ್ಗೆ ನಾನು ಹೇಳುವುದಿಲ್ಲ. ಆದ್ದರಿಂದ ಎಚ್ಚರ ವಹಿಸಿ ನಿಮಗೆ ಸೂಕ್ತ ಎನಿಸಿದ, ಸಮಾಜದ ಒಳಿತಿಗೆ ಬೇಕಾದವರನ್ನು ಆಯ್ಕೆ ಮಾಡಿ. ಮಕ್ಕಳಿಗೆ ಉತ್ತಮ ಶೈಕ್ಷಣಿಕ ವ್ಯವಸ್ಥೆ ನೀಡಿ, ಸಂಸ್ಕಾರ ಕಲಿಸಿ. ಮೊಬೈಲ್, ಮದ್ಯವ್ಯಸನ ಹಾಗೂ ದುಶ್ಚಟದಿಂದ ದೂರವಿದ್ದು, ಸುಸಂಸ್ಕೃತರಾಗಿ ಜೀವನ ನಡೆಸಿ ಎಂದು ಸಲಹೆ ನೀಡಿದರು.

    ನೂತನ ಪದಾಧಿಕಾರಿಗಳಿಗೆ ಸನ್ಮಾನ: ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಎಸ್.ರಾಚಶೆಟ್ಟಿ(ತಮ್ಮಯ್ಯ), ಉಪಾಧ್ಯಕ್ಷ ಎನ್.ರಾಚಪ್ಪ, ಕಾರ್ಯದರ್ಶಿ ಎಸ್.ನವೀನ್‌ಕುಮಾರ್, ಸಹ ಕಾರ್ಯದರ್ಶಿ ಮುತ್ತುರಾಜ್, ಖಜಾಂಚಿ ಎಂ.ಮಾದೇಶ, ಸಂಘಟನಾ ಕಾರ್ಯದರ್ಶಿಗಳಾದ ವಿ.ರಮೇಶ್, ಎನ್.ಮಹೇಶ್, ಗಿರೀಶ್, ಆರ್.ಮಂಜು, ಎನ್.ರಾಜು, ಮಹೇಂದ್ರ, ಎನ್. ರಾಚಪ್ಪಾಜಿ, ಸಂಚಾಲಕರಾದ ನಾಗೇಂದ್ರ, ಮಂಜು, ಉಮೇಶ್, ನಿರ್ದೇಶಕರಾದ ಸುರೇಶ್, ಸುಬ್ಬಣ್ಣ, ಎಸ್.ರವಿಕುಮಾರ್, ಚಂದ್ರು, ವೆಂಕಟೇಶ್, ಬಲರಾಮು ಅವರಿಗೆ ಶಾಲು, ಹಾರ ಹಾಕಿ ಸನ್ಮಾನಿಸಲಾಯಿತು. ಬಳಿಕ ಆದೇಶ ಪತ್ರವನ್ನು ನೀಡಲಾಯಿತು.

    ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಚಿನ್ನಸ್ವಾಮಿ, ತಾಲೂಕು ಸಂಘದ ಮಾಜಿ ಅಧ್ಯಕ್ಷ ಸೋಮಣ್ಣ, ಗೌರವಾಧ್ಯಕ್ಷ ನಾರಾಯಣ ಶೆಟ್ರು, ಯಳಂದೂರು ಸವಿತಾ ಸಮಾಜದ ಉಪಾಧ್ಯಕ್ಷ ಶ್ರೀಕಂಠಸ್ವಾಮಿ, ಖಜಾಂಚಿ ರಾಮಣ್ಣ, ಹನೂರು ತಾಲೂಕು ಅಧ್ಯಕ್ಷ ಮಹದೇವ, ಮಹಿಳಾ ಸಂಘದ ಅಧ್ಯಕ್ಷೆ ದೊಡ್ಡತಾಯಮ್ಮ, ಪ್ರಧಾನ ಕಾರ್ಯದರ್ಶಿ ಮಹೇಶ್ವರಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts