More

    ಶೋಕಿಗಾಗಿ ಸರಗಳ್ಳತನ, ಇಬ್ಬರ ಬಂಧನ

    ಮೈಸೂರು: ಶೋಕಿ ಜೀವನಕ್ಕಾಗಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


    ನಗರದ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ 2021ರ ಅಕ್ಟೋಬರ್ 30ರಂದು ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಈ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ವಿಶೇಷ ಅಪರಾಧ ಪತ್ತೆ ತಂಡ ರಚಿಸಲಾಗಿತ್ತು.


    ಕೃತ್ಯ ನಡೆದ ಸ್ಥಳಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ, ಆರೋಪಿಗಳು ಕೃತ್ಯ ಎಸಗಲು ಉಪಯೋಗಿಸುತ್ತಿದ್ದ ವಾಹನದ ಬಗ್ಗೆ ಮಹತ್ವದ ಸುಳಿವು ದೊರೆಯಿತು. ಇದನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದು ಪತ್ತೆಯಾಗಿದೆ.


    3 ಪ್ರಕರಣಗಳಿಗೆ ಸಂಬಂಧಿಸಿದಂತೆ 7.10 ಲಕ್ಷ ರೂ. ಬೆಲೆಬಾಳುವ 205 ಗ್ರಾಂ. ತೂಕದ 5 ಚಿನ್ನದ ಸರಗಳು, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಮೂರು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇದರಿಂದಾಗಿ ನರಸಿಂಹರಾಜ ಪೊಲೀಸ್ ಠಾಣೆಯ-1, ನಜರ್‌ಬಾದ್ ಠಾಣೆಯ-1 ಹಾಗೂ ಮೇಟಗಳ್ಳಿ ಪೊಲೀಸ್ ಠಾಣೆಯ 1 ಸರಗಳ್ಳತನ ಪ್ರಕರಣಗಳು ಭೇದಿಸಿದಂತಾಗಿದೆ.

    ಸಹಾಯಕ ಪೊಲೀಸ್ ಆಯುಕ್ತ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಲಕ್ಷ್ಮೀಕಾಂತ್ ತಳವಾರ್, ಪ್ರಸಾದ್, ಪಿಎಸ್‌ಐಗಳಾದ ಎಸ್. ರಾಜು, ಗಂಗಾಧರ್, ಚಂದ್ರಶೇಖರ್ ಇಟಗಿ, ಎಎಸ್‌ಐ ಅನಿಲ್ ಕೆ. ಶಂಕಪಾಲ್, ಸಿಬ್ಬಂದಿ ಲಿಂಗರಾಜಪ್ಪ, ರಮೇಶ್, ಡಿ.ಎಸ್. ಸುರೇಶ್, ಜೀವನ್, ಕೆ.ಬಿ. ಹರೀಶ್, ಹನುಮಂತ ಕಲ್ಲೇದ್, ಮಲ್ಲಿಕಾರ್ಜುನಪ್ಪ, ಹರೀಶ್, ಮಹೇಶ್ ಹೊಸಮನಿ , ಮಂಜುನಾಥ, ಸುನೀಲ್ ಕುಮಾರ್, ಮಹೇಶ್, ಕುಮಾರ್, ಆರಾಧ್ಯ, ಮಂಜುನಾಥ, ಶ್ಯಾಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts