More

    ಶೇ.40 ಕಮಿಷನ್‍ನಿಂದ ಕಾಮಗಾರಿ ಕಳಪೆ

    ಆನವಟ್ಟಿ: ಬಿಜೆಪಿ ಮತದ ಬಗ್ಗೆ ಮಾತ್ರ ಚಿಂತಿಸುತ್ತದೆ. ಕಾಂಗ್ರೆಸ್ ಮತದಾರರ ಕುಟುಂಬದ ಸುರಕ್ಷತೆಯ ಬಗ್ಗೆಯೂ ಆಲೋಚಿಸುತ್ತದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.
    ಸೋಮವಾರ ಸ್ವಗ್ರಾಮ ಕುಬಟೂರಿನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ನೀಡುತ್ತಿರುವ ಭರವಸೆಗಳ ಗ್ಯಾರೆಂಟಿ ಕಾರ್ಡ್ ವಿತರಿಸಿ, ಪಕ್ಷ ನೀಡುವ ಸವಲತ್ತುಗಳು ಹಾಗೂ ಸಾ„ಸಿರುವ ಸಾಧನೆಗಳ ಬಗ್ಗೆ ತಿಳಿಸಿ ಮಾತನಾಡಿದರು.
    ಬಿಜೆಪಿಯವರದ್ದು ಕೇಂದ್ರೀಕೃತ ಅ„ಕಾರ. ಆದರೆ ಕಾಂಗ್ರೆಸ್‍ನವರದ್ದು ಅ„ಕಾರ ವಿಕೇಂದ್ರೀಕರಣಗೊಳಿಸಿ ಸಾಮಾನ್ಯ ಜನತೆಗೂ ಸಮಾನ ಅ„ಕಾರ ದೊರಕಿಸುವಂತಾಗಬೇಕು ಎನ್ನುವ ಯೋಜನೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ದಾಪುಗಾಲಿಟ್ಟಿದೆ. ಬಡವರ ಅನುಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ ಅಕ್ಕಿಯನ್ನು ಮೊಟಕುಗೊಳಿಸಿ 5 ಕೆ.ಜಿ. ನೀಡಲಾಗುತ್ತಿದೆ. ಕಾಂಗ್ರೆಸ್ ಅ„ಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, ಕುಟುಂಬದ ಒಡತಿಗೆ 2 ಸಾವಿರ ರೂ. ಸಹಾಯಧನ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದರು.
    ಬಿಜೆಪಿಯ ಶೇ.40 ಕಮಿಷನ್‍ನಿಂದಾಗಿ ಕಾಮಗಾರಿಗಳು ಕಳಪೆ ಆಗುತ್ತಿವೆ. ಜನರ ಅನುಕೂಲಕ್ಕಾಗಿ ಅನುದಾನಗಳನ್ನು ತರದೆ ಕಮಿಷನ್‍ಗಾಗಿ ಕಾಮಗಾರಿ ನಡೆಸಲಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದೆ ದುಸ್ತರವಾಗಿದೆ. ಬಿಜೆಪಿಯವರದ್ದು ಕೇವಲ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ತಾಲೂಕಿನ ಶಾಸಕರೂ ಅದೇ ಹಾದಿಯಲ್ಲಿ ಸಾಗಿದ್ದು ಒಂದೇ ಒಂದು ಬಸವ ವಸತಿ ಯೋಜನೆಯ ಮನೆಗಳನ್ನು ವಿತರಿಸಿಲ್ಲ. ಕ್ಷೇತ್ರದ ಶಾಸಕರು ತಮ್ಮಿಂದಾದ ತಪ್ಪುಗಳನ್ನು ಅ„ಕಾರಿಗಳ ಮೇಲೆ ಹಾಕಿ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ದೂರಿದರು.

    ಅ„ಕಾರ ಕೇಂದ್ರೀಕರಣ ಹೆಸರಿನಲ್ಲಿ ಜಿಪಂ, ತಾಪಂ ಚುನಾವಣೆಗಳನ್ನು ನಡೆಸದೆ ಎಲ್ಲ ಅನುದಾನಗಳು ಶಾಸಕರ ಹಿಡಿತದೊಳಗೆ ಇರುವಂತೆ ಬಿಜೆಪಿ ಮಾಡಿದೆ. ಇದರಿಂದಾಗಿ ಶಾಸಕರು ಅ„ಕಾರಿಗಳ ಮೇಲೆ ದರ್ಪ ತೋರಿಸಲು ನೇರ ಕಾರಣವಾಗಿದೆ. ಪಂಚಾಯಿತಿಗಳಿಂದ ಜನ ಸಾಮಾನ್ಯರಿಗೆ ದೊರೆಯಬೇಕಿದ್ದ ಸವಲತ್ತುಗಳು ದೊರೆಯದೆ ಹೈರಾಣಾಗಿದ್ದಾರೆ ಎಂದರು.
    ಯಾರನ್ನೋ ಮುಳುಗಿಸಿ, ಇನ್ಯಾರಿಗೋ ನೀರು ನೀಡುವ ಸಂಸ್ಕøತಿ ನಮ್ಮದಲ್ಲ. ಈ ಹಿಂದೆ ತಾಲೂಕಿನ ಬಹಳಷ್ಟು ಜನ ಬ್ಯಾತನಾಳ ಡ್ಯಾಂ ಯೋಜನೆಯಿಂದಾಗಿ ಮುಳುಗುವ ಭೀತಿಯಲ್ಲಿದ್ದರು. ಬ್ಯಾತನಾಳ ಹಾಗೂ ದಂಡಾವತಿ ಯೋಜನೆಯಿಂದಾಗಿ ಸೊರಬ ಭಾಗದಲ್ಲಿ ಕೆಲವು ಹಳ್ಳಿಗಳು ಮುಳುಗಡೆಗೊಂಡು ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಂದು ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ನೇತೃತ್ವದಲ್ಲಿ ಹೋರಾಟದ ಮೂಲಕ ಯೋಜನೆ ಸ್ಥಗಿತಗೊಳಿಸಿದ್ದೆವು. ಅದಕ್ಕೆ ಪರ್ಯಾಯವಾಗಿ ಮೂಡಿ-ಮುಗೂರು-ಕಚವಿ ಏತ ನೀರಾವರಿ ಮೂಲಕ ತಾಲೂಕಿನ ರೈತರ ನೀರಾವರಿ ಕನಸನ್ನು ನನಸು ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.
    ಬೂತ್ ಮಟ್ಟದ ಅಧ್ಯಕ್ಷ ನಿಂಗಪ್ಪ, ಉಮೇಶ್ ಕುಬಟೂರು, ಪಿ.ಎಸ್.ಮಂಜುನಾಥ, ಉದಯ್, ಚಂದ್ರಶೇಖರ್ ಗೌಡ, ಹಬೀಬುಲ್ಲಾ ಹವಾಲ್ದಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts