More

    ಶೆಟರ್ ಮುರಿದು ಮದ್ಯ ದೋಚಿದ ಕಳ್ಳರು

    ಬೀದರ್: ಲಾಕ್ಡೌನ್ನಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವುದರಿಂದ ಕಳ್ಳರ ವಕ್ರದೃಷ್ಟಿ ಈಗ ಮದ್ಯ ಅಂಗಡಿ ಮೇಲೆ ಬಿದ್ದಿದೆ. ನಗರದ ಚಿಟ್ಟಾವಾಡಿ ಹತ್ತಿರದ ಎಂಎಸ್ಐಎಲ್ ಮದ್ಯದ ಅಂಗಡಿಗೆ ಕನ್ನ ಹಾಕಿದ ಕಳ್ಳರು, 1.69 ಲಕ್ಷ ರೂ. ಮೌಲ್ಯದ ಮದ್ಯದ ಬಾಟಲ್ಗಳನ್ನು ದೋಚಿದ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.
    ಅಂಗಡಿ ಶೆಟರ್ಗಳಿಗೆ ಹಾಕಿದ್ದ ಬೀಗಗಳನ್ನು ಕಬ್ಬಿಣದ ರಾಡ್ನಿಂದ ಮುರಿದು ಒಳ ನುಗ್ಗಿದ ಕಳ್ಳರು, ವಿವಿಧ ಬ್ರಾಂಡ್ಗಳ ಮದ್ಯದ ಬಾಟಲಿಯುಳ್ಳ ಕಾರ್ಟನ್ಗಳನ್ನೇ ಹೊತ್ತೊಯ್ದಿದ್ದಾರೆ. ಇವರು ಒಯ್ದ ಮದ್ಯದ ಮೌಲ್ಯ 1.69 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮದ್ಯದ ಬಾಟಲ್ಗಳ ಜತೆಗೆ ಅಲ್ಲಿದ್ದ ಒಂದು ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಒಯ್ದಿದ್ದಾರೆ. ಇಲ್ಲಿ ಅಳವಡಿಸಿದ್ದ ಕ್ಯಾಮರಾ ಸಹ ಕಿತ್ತುಕೊಂಡು ಹೋಗಿದ್ದಾರೆ.
    ದೇಶಾದ್ಯಂತ ಲೌಕ್ಡೌನ್ ಜಾರಿ ದಿನದಿಂದ ವೈನ್ಶಾಪ್ ಸೇರಿ ಎಲ್ಲ ನಮೂನೆ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಹೀಗಾಗಿ ಮದ್ಯಪ್ರೀಯರು ಎಣ್ಣೆಗಾಗಿ ಪರದಾಡುತ್ತಿದ್ದಾರೆ. ಬಾ್ಲೃಕ್ನಲ್ಲಿ ಮದ್ಯವನ್ನು ದುಪ್ಪಟ್ಟು ದರದಲ್ಲಿ ಬಿಕ್ರಿಯಾಗುತ್ತಿದೆ. ಈ ಕಾರಣಕ್ಕೆ ಮದ್ಯದ ಅಂಗಡಿ ಕಳ್ಳರ ಟಾಗರ್ೆಟ್ ಆಗಿರುವ ಶಂಕೆಯಿದೆ. ಎಣ್ಣೆಪ್ರೀಯರು ಸಹ ಈ ಸಂಚು ರೂಪಿಸಿದ ಸಾಧ್ಯತೆಗಳಿವೆ.
    ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಹೀರಾ, ಸಿಪಿಐ ಶ್ರೀಕಾಂತ ಅಲ್ಲಾಪುರೆ, ರಾಮಪ್ಪ ಸಾವಳಗಿ, ಪಿಎಸ್ಐ ಮಂಜನಗೌಡ ಪಾಟೀಲ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದರು. ಶ್ವಾನದಳ, ಬೆರಳಚ್ಚು ಘಟಕದಿಂದ ಪರಿಶೀಲನೆ ನಡೆಸಲಾಯಿತು. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts