More

    ಶೂನ್ಯ ಬಡ್ಡಿ ದರದಲ್ಲೇ ಮರುಪಾವತಿಗೆ ಅವಕಾಶ ನೀಡಲಿ

    ಶಿರಸಿ: ಸರ್ಕಾರದ ಶೂನ್ಯ ಬಡ್ಡಿದರ ಯೋಜನೆಯಲ್ಲಿ ಸಾಲ ಪಡೆದವರಿಗೆ ಜೂನ್ ತಿಂಗಳಲ್ಲೂ ಶೂನ್ಯ ಬಡ್ಡಿ ದರದಲ್ಲೇ ಮರುಪಾವತಿಗೆ ಸರ್ಕಾರ ಅವಕಾಶ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರು ಹೇಳಿದರು.

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ 20 ಕ್ಕೂ ಹೆಚ್ಚು ಬಡವರಿಗೆ ತಲಾ 200 ರೂ.ಗಳ ಧನ ಸಹಾಯ ವಿತರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳೆ ಸಾಲ ಮನ್ನಾ ಸಂಬಂಧ ಜಿಲ್ಲೆಗೆ 57 ಕೋಟಿ ರೂ. ಬರಬೇಕಿದೆ. ಆ ಮೊತ್ತ ತಕ್ಷಣ ಬಿಡುಗಡೆ ಮಾಡಬೇಕು. ಸಾಲ ವಿತರಿಸುವ ವೇಳೆ ಹೆಚ್ಚಿನ ಷರತ್ತು ಇಲ್ಲದೆ ನೀಡಿರುವ ಹಣವನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ಶೇ.12ರ ಬಡ್ಡಿ ತುಂಬುವಂತೆ ಹೇಳಲಾಗಿದೆ. ಇದು ಸರಿಯಲ್ಲ. ಜೂನ್ ತಿಂಗಳಲ್ಲೂ ಶೂನ್ಯ ಬಡ್ಡಿ ದರದಲ್ಲೇ ಭರಣಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

    ಹೊಸ ತೆರಿಗೆ ಆಕರಣೆ ಸಲ್ಲ: ಸರ್ಕಾರದ ಆದೇಶ ಬಂದರೂ ನಗರಸಭೆ ಹೊಸ ತೆರಿಗೆಯನ್ನೇ ಆಕರಿಸುತ್ತಿದೆ. ಇದು ಖಂಡನೀಯವಾಗಿದ್ದು, ಒಂದೊಮ್ಮೆ ಈ ಪ್ರವೃತ್ತಿ ನಿಲ್ಲದಿದ್ದರೆ ಕಾಂಗ್ರೆಸ್​ನಿಂದ ಪ್ರತಿಭಟಿಸಲಾಗುವುದು. ಹೆಸ್ಕಾಂ ಕೂಡ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ಕಳುಹಿಸುತ್ತಿರುವ ಬಿಲ್ ನಲ್ಲೂ ಸಾಕಷ್ಟು ಏರಿಕೆ ಮಾಡಿದೆ. ಇದನ್ನು ಸಮರ್ಪಕಗೊಳಿಸುವ ಕಾರ್ಯ ಆಗಬೇಕು ಎಂದರು.

    ಕಾರ್ವಿುಕ ಇಲಾಖೆ ಯೋಜನೆಯಡಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಿಟ್ ವಿತರಿಸಲಾಗುತ್ತಿದೆ. ಆದರೆ, ಆ ಕಿಟ್​ಗಳ ಮೇಲೆ ಆಯಾ ಕ್ಷೇತ್ರದ ಶಾಸಕರ ಭಾವಚಿತ್ರ ಬಳಸಿ ರಾಜಕೀಯ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು.

    ಪುಷ್ಪ ನಮನ: ಮಾಜಿ ಪ್ರಧಾನಿ ರಾಜೀವ ಗಾಂಧಿ ಪುಣ್ಯ ತಿಥಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ, ಪ್ರಮುಖರಾದ ಎಸ್.ಕೆ. ಭಾಗವತ, ಪ್ರದೀಪ ಶೆಟ್ಟಿ, ಜಗದೀಶ ಗೌಡ, ಸತೀಶ ನಾಯ್ಕ, ಶ್ರೀನಿವಾಸ ನಾಯ್ಕ, ಸುಮಾ ಉಗ್ರಾಣಕರ, ಬಸವರಾಜ ದೊಡ್ಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts