More

    ಶುಶ್ರೂಷಾ ಅಧಿಕಾರಿಗಳಿಗೆ ಸೌಲಭ್ಯ ಕೊಡಿ

    ಬೀದರ್: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ)ಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಶುಶ್ರೂಷಾ ಅಧಿಕಾರಿ (ನರ್ಸಿಂಗ್​ ಆಫೀಸರ್)ಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಬ್ರಿಮ್ಸ ಶುಶ್ರೂಷಕ ನೌಕರರ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.
    ಬ್ರಿಮ್ಸ ಎದುರು ಕಪ್ಪು ಪಟ್ಟಿ ಧರಿಸಿ ಮೌನವಾಗಿ ಪ್ರತಿಭಟನೆ ನಡೆಸಿದ ನೌಕರರು, ಕರೊನಾ ಸಂಕಷ್ಟದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೆ ನ್ಯಾಯಯುತವಾಗಿ ಸಿಗಬೇಕಾದಂಥ ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
    ಎನ್ಪಿಎಸ್, ಕೆಜಿಐಡಿ, ಜ್ಯೋತಿ ಸಂಜೀವಿನಿ, ಡಿಸಿಆರ್ಜಿ ಇತರ ಸೌಲಭ್ಯಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳಿಗೆ ಸಿಗುತ್ತಿವೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳು ವಂಚಿತರಾಗಿದ್ದಾರೆ ಎಂದು ದೂರಿದರು.
    ಬ್ರಿಮ್ಸ ಶುಶ್ರೂಷಾಧಿಕಾರಿಗಳಿಗೆ ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಜಾರಿಗೊಳಿಸಿಲ್ಲ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿ ಬರುವ ಸ್ವಾಯತ್ತ ಸಂಸ್ಥೆಗಳಾದ ಬೆಂಗಳೂರಿನ ಜಯದೇವ ಆಸ್ಪತ್ರೆ ಮತ್ತು ನೆಫ್ರೋ ಯೂರಾಲಜಿ ಸಂಸ್ಥೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ನಮಗೆ ಪಿಂಚಣಿ ಯೋಜನೆ ಸಿಗುತ್ತಿಲ್ಲ. ಕೂಡಲೇ ಇದನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
    ಸಂಘದ ಅಧ್ಯಕ್ಷ ಪ್ರಕಾಶ ಬಿ., ಪ್ರಮುಖರಾದ ವಿಜಯಕುಮಾರ, ಸಂತೋಷಕುಮಾರ, ರಾಜೇಶ ಇತರರಿದ್ದರು. ಹೋರಾಟಕ್ಕೆ ಸಕರ್ಾರಿ ಶುಶ್ರೂಷಕರ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ ಬೆಂಬಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts