More

    ಶುಶ್ರೂಷಕರು ಎರಡನೇ ವೈದ್ಯರು ಇದ್ದಂತೆ, ಎಂಎಸ್‌ಆರ್ ಆಸ್ಪತ್ರೆ ಅಧ್ಯಕ್ಷ ಡಾ.ಕೆ.ಸಿ. ಗುರುದೇವ್ ಅಭಿಪ್ರಾಯ

    ನೆಲಮಂಗಲ: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ನರ್ಸಿಂಗ್ ಶಿಕ್ಷಣ ಮಹತ್ವದ ಪಾತ್ರವಹಿಸುತ್ತದೆ ಎಂದು ಎಂ.ಎಸ್. ರಾಮಯ್ಯ ಆಸ್ಪತ್ರೆ ಅಧ್ಯಕ್ಷ ಡಾ. ಕೆ.ಸಿ. ಗುರುದೇವ್ ಅಭಿಪ್ರಾಯಪಟ್ಟರು.

    ನಗರದ ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಎಂವಿಎಂ ಕಲ್ಯಾಣ ಮಂಟದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.

    ಬೆಳಕು ಜ್ಞಾನದ ಸಂಕೇತ. ಅನಾರೋಗ್ಯವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಶಾಶ್ವತ ಆರೋಗ್ಯವನ್ನು ಸ್ಥಾಪಿಸಲು ನರ್ಸಿಂಗ್ ಶಿಕ್ಷಣದ ಆರಂಭದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

    ಶುಶ್ರೂಷಕರು ಎರಡನೇ ವೈದ್ಯರಿದ್ದಂತೆ. ವೈದ್ಯಕೀಯ ಕ್ಷೇತ್ರದಂತೆ ನರ್ಸಿಂಗ್ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳಿವೆ. ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ ಸೇರಿರುವ ವಿದ್ಯಾರ್ಥಿಗಳು ಅಭ್ಯಾಸದ ವೇಳೆ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ವೃತ್ತಿಪರತೆಗೆ ಬೇಕಾದ ಜ್ಞಾನದ ಜತೆಗೆ ಪ್ರಾಮಾಣಿಕತೆ, ಅರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಬೆಂಗಳೂರು ಕೆಂಪೇಗೌಡ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ವಿ.ಟಿ. ಲಕ್ಷ್ಮಮ್ಮ ಮಾತನಾಡಿ, ಪ್ಲಾರೆನ್ಸ್ ನೈಟಿಂಗೇಲ್ ಅವರ ಆದರ್ಶಗಳನ್ನು ನರ್ಸಿಂಗ್ ವಿದ್ಯಾರ್ಥಿಗಳು ಅನುಸರಣೆ ಮಾಡಬೇಕು. ಶುಶ್ರೂಷಕ ವೃತ್ತಿ ಕೀಳಲ್ಲ. ಶ್ರೇಷ್ಠ ವೃತ್ತಿ. ಬದಲಾವಣೆಗಳಿಗೆ ಒಗ್ಗಿಕೊಂಡು ಕೆಲಸ ಮಾಡಬೇಕಿದೆ ಎಂದರು.

    ನರ್ಸಿಂಗ್‌ನ ಮೊದಲ ವರ್ಷದ ವಿದ್ಯಾರ್ಥಿಗಳು ತರಬೇತಿಯ ಅವಧಿಯಲ್ಲಿ ಉತ್ತಮ ಶಿಕ್ಷಣ ಪಡೆದು ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಸಮಾಜದ ಆರೋಗ್ಯವನ್ನು ಕಾಪಾಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

    ಕರೊನಾ 2ನೇ ಅಲೆಯ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹರ್ಷ ರಾಮಯ್ಯ ಆಸ್ಪತ್ರೆಯ ಶುಶ್ರೂಷಕರು ಹಾಗೂ ವೈದ್ಯರನ್ನು ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್. ಶಿವಕುಮಾರ್ ಸನ್ಮಾನಿಸಿದರು.

    ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಜೆಸಿಂತಾ ಆರ್. ಮರಿಯಪ್ಪ, ಫಿಜಿಯೋಥೆರಫಿ ವಿಭಾಗದ ಪ್ರಾಂಶುಪಾಲ ಡಾ. ಜಯಪ್ರಕಾಶ್ ಜನಾರ್ದನ್ ವಾರ್ಷಿಕ ವರದಿ ಮಂಡಿಸಿದರು.

    ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಗಿರಿಜಾ, ಮುಖ್ಯಕಾರ್ಯನಿರ್ವಹಕ ಅಧಿಕಾರಿ ಎಂ.ಸಿ. ನಾರಾಯಣ್‌ಗೌಡ, ಉಪಪ್ರಾಂಶುಪಾಲೆ ನೂರ್‌ಜಹಾನ್, ಪವನಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಟಿ.ಎಂ. ಗೌಡ, ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲೆ ಎಲ್. ಪೂರ್ಣಿಮಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts