More

    ಶುಲ್ಕ ವಸೂಲಿ ವಿರೋಧಿಸಿ ದೂರು

    ಕಾರವಾರ: ದಾಖಲಾತಿ ಹಾಗೂ ಶುಲ್ಕ ವಸೂಲಾತಿ ಕಾರ್ಯವನ್ನು ನಗರದ ಸೇಂಟ್ ಮೈಕಲ್ ಶಾಲೆ ಪ್ರಾರಂಭಿಸಿರುವುದನ್ನು ವಿರೋಧಿಸಿ ಪಾಲಕರು ಡಿಡಿಪಿಐ ಕಚೇರಿಗೆ ಮಂಗಳವಾರ ದೂರು ನೀಡಿದರು.

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಶಾಲೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದೇ ಗೊತ್ತಿಲ್ಲ. ಅಲ್ಲದೆ, ಬೋಧನಾ ಶುಲ್ಕ ಹೆಚ್ಚಳ ಮಾಡದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದನ್ನು ಧಿಕ್ಕರಿಸಿ ಶಾಲೆ ಪಾಲಕರಿಗೆ ಕರೆ ಮಾಡಿ ಶಾಲೆಯ ದಾಖಲಾತಿ ಮಾಡಿಕೊಳ್ಳುವಂತೆ ಹೇಳುತ್ತಿದೆ. ದಾಖಲಾತಿ ಮಾಡದಿದ್ದಲ್ಲಿ ಸೀಟು ಸಿಗುವುದಿಲ್ಲ ಎಂದು ಎಚ್ಚರಿಸಲಾಗುತ್ತಿದೆ. ಅಲ್ಲದೆ, ಕಳೆದ ವರ್ಷಕ್ಕಿಂತ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು. ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದರು.

    ಡಿಡಿಪಿಐ ಹರೀಶ ಗಾಂವಕರ್ ಅನುಪಸ್ಥಿತಿಯಲ್ಲಿ ಶಿಕ್ಷಣಾಧಿಕಾರಿ ಎನ್.ಜಿ. ನಾಯಕ ಪಾಲಕರ ದೂರು ಆಲಿಸಿದರು. ಶುಲ್ಕ ವಸೂಲಿ ಮಾಡಬಾರದು ಎಂದು ಸರ್ಕಾರ ಹೇಳಿಲ್ಲ. ಪಾಲಕರಿಗೆ ತುಂಬುವಂತೆ ಒತ್ತಡ ಹೇರಬಾರದು ಎಂದಿದೆ. ಶುಲ್ಕದ ವಿವರವನ್ನು ಶಾಲೆಯ ನೋಟಿಸ್ ಬೋರ್ಡ್​ನಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಆ ನಿಯಮಗಳನ್ನು ಮೀರಿದ್ದರೆ ಡಿಡಿಪಿಐ ಅವರ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

    ಒಂದೇ ಬಾರಿ ಶುಲ್ಕ ನೀಡುವಂತೆ ಹೇಳಿಲ್ಲ. ಯಾರಿಗೂ ಒತ್ತಾಯವನ್ನೂ ಮಾಡಿಲ್ಲ. ಸಾಧ್ಯವಾದರೆ ಶುಲ್ಕ ತುಂಬುವಂತೆ ಕರೆ ಮಾಡಿ ಸೂಚಿಸಲಾಗಿದೆ. ಸರ್ಕಾರದ ಯಾವುದೇ ನಿಯಮ ಮೀರಿಲ್ಲ.
    ವಲೇರಿಯನ್ ಸಿಕ್ವೆರಾ, ಸೇಂಟ್ ಜೋಸೆಪ್ಸ್ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts