More

    ಶುದ್ಧ ಭಾವದಿಂದ ಸತ್ವಪೂರ್ಣ ಕಾವ್ಯ ರಚನೆ

    ಬೆಳಗಾವಿ: ಭಾವ ಶುದ್ಧಿಯಿಂದ ಸತ್ವಪೂರ್ಣ ಕಾವ್ಯ ರಚನೆ ಸಾಧ್ಯ. ಕಾವ್ಯ ಪರಂಪರೆಯ ಜ್ಞಾನ ವಿಶಿಷ್ಟ ಕಲ್ಪನಾ ಶಕ್ತಿ ಮತ್ತು ಭಾವಸೂಕ್ಷ್ಮತೆಗಳು ಉತ್ತಮ ಕಾವ್ಯ ರಚನೆಗೆ ಅನಿವಾರ್ಯ ಎಂದು ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ಸಿದ್ಧರಾಮ ಸ್ವಾಮೀಜಿ ಹೇಳಿದರು.

    ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಜಿಲ್ಲಾ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಗೌರಿ ಕರ್ಕಿ ಹಾಗೂ ಭಾರತಿ ಸಂಜಯ ಕೋರೆ ಅವರು ರಚಿಸಿದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗದ್ಯ ಮತ್ತು ಪದ್ಯದ ಸಾಹಿತ್ಯದಲ್ಲಿ ಹೆಚ್ಚು ವ್ಯತ್ಯಾಸ ಕಾಣದು. ಸಾಹಿತಿ ಭಾರತಿ ಕೋರೆ ಅವರು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮೇರು ವ್ಯಕ್ತಿತ್ವವನ್ನು ಕೃತಿಯಲ್ಲಿ ಕಟ್ಟಿ ಕೊಟ್ಟಿರುವುದು ವಿಶೇಷ ಎಂದರು. ಲೇಖಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ. ಪ್ರಭಾಕರ ಕೋರೆ ಅವರಂತಹ ಮೇರು ವ್ಯಕ್ತಿತ್ವಗಳ ಕುರಿತು ಎಚ್ಚರಿಕೆಯಿಂದ ಬರೆದಿರುವ ಲೇಖಕಿಯರ ಬರಹಗಳು ಮಾದರಿಯಾಗಿವೆ ಎಂದರು ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲ ಬ್ಯಾಕೋಡ, ಆಶಾ ಯಮಕನಮರಡಿ, ಸಾಹಿತಿ ಯ.ರು.ಪಾಟೀಲ, ಬಸವರಾಜ ಗಾರ್ಗಿ, ಸುನಂದಾ ಎಮ್ಮಿ , ಮಹಾಂತೇಶ ಮೆಣಸಿನಕಾಯಿ, ಬಿ. ಡಿ.ಕರ್ಕಿ, ಪ್ರೊ ಗಿರೀಶ ಕರ್ಕಿ, ಶೈಲಜಾ ಭಿಂಗೆ, ಸುರೇಖಾ ಮಾನ್ವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts