More

    ಶುದ್ಧ ಕುಡಿವ ನೀರು ಪೂರೈಕೆಗೆ ಸಿಇಒ ಸೂಚನೆ

    ಕೊಪ್ಪಳ: ಜಿಲ್ಲೆಯ ಜನರಿಗೆ ಶುದ್ಧ ಕುಡಿವ ನೀರು ಪೂರೈಸಿ. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನಿರು ಒದಗಿಸುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಪಂ ಸ್ಥಾಯಿ ಸಮಿತಿ ಕೊಠಡಿಯಲ್ಲಿ ಜಿಲ್ಲೆಯ ಕುಡಿವ ನೀರು ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

    ಈಗಾಗಲೇ 14 ಗ್ರಾಮಗಳಿಗೆ 16 ಖಾಸಗಿ ಕೊಳವೆ ಬಾವಿಗಳ ಮೂಲಕ ನಿರು ಪೂರೈಕೆ ಮಾಡಲಾಗುತ್ತಿದೆ. ಕನಕಗಿರಿ ತಾಲೂಕಿನ 4 ಗ್ರಾಮಗಳಲ್ಲಿ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಿಲ್ಲವೆಂದು ವರದಿ ಬಂದಿದೆ. ಅಂಥ ಕೊಳವೆಬಾವಿ ಮುಚ್ಚಿಸಿದ್ದು, ಅದರಿಂದ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಿ. ಶುದ್ಧ ಕುಡಿವ ನೀರಿನ ಘಟಕ ರಿಪೇರಿ ಸಂಬಂಧ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಡುಗಡೆಯಾದ ತಕ್ಷಣ ದುರಸ್ಥಿ ಕೈಗೊಳ್ಳಿ. ಸರ್ಕಾರದಿಂದ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಳೆದ ಮೂರು ತಿಂಗಳಲ್ಲಿ ಸಮಸ್ಯಾತ್ಮಕ ಗ್ರಾಮಗಳಲ್ಲಿ 97 ಕೊಳವೆ ಬಾವಿ ಕೊರೆಸಲಾಗಿದೆ.

    902 ನೀರಿನ ಮೇಲ್ತೊಟ್ಟಿ (ಒಎಚ್‌ಟಿ) ಸ್ವಚ್ಚಗೊಳಿಸಲಾಗಿದೆ. ಜಿಲ್ಲೆಯ 153 ಗ್ರಾಪಂಗಳಲ್ಲಿ ತಲಾ ಐವರು ಮಹಿಳೆಯರನ್ನು ಗುರುತಿಸಿ ಕುಡಿವ ನೀರಿನ ಗುಣಮಟ್ಟ ಪರೀಕ್ಷೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 145 ಗ್ರಾಮಗಳಲ್ಲಿ ತರಬೇತಿ ಕಾರ್ಯ ಮುಗಿದಿದೆ. ನೀರಗಂಟಿಗಳಿಗೆ ನೀರು ಸರಬರಾಜು ಕುರಿತು ತಾಂತ್ರಿಕ ತರಬೇತಿ ಮುಂದುವರೆಸುವಂತೆ ತಾಕೀತು ಮಾಡಿದರು.

    ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಮಹೇಶ ಶಾಸ್ತ್ರಿ ಮಾತನಾಡಿ, ಜಿಲ್ಲೆಯಲ್ಲಿ 673 ಶುದ್ಧ ಕುಡಿವ ನೀರಿನ ಘಟಕಗಳಿದ್ದು, 128 ಘಟಕಗಳು ದುರಸ್ಥಿಯಲ್ಲಿವೆ. 18 ಘಟಕಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ. ಎರಡು ತಿಂಗಳಲ್ಲಿ 30 ಘಟಕಗಳನ್ನು ರಿಪೇರಿ ಮಾಡಲಾಗಿದೆ. ಸದ್ಯ 527 ಘಟಕ ಚಾಲ್ತಿಯಲ್ಲಿವೆ. ಬಾಕಿ 146ಘಟಕಗಳ ದುರಸ್ಥಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಪಂಗಳಿಗೆ ಕುಡಿವ ನೀರು ಪರೀಕ್ಷೆ ಮಾಡುವ ಸಾಮಗ್ರಿ ಖರೀದಿಸಿದ್ದು, ಶೀಘ್ರ ಪೂರೈಸುವುದಾಗಿ ತಿಳಿಸಿದರು. ಹೋಬಳಿವಾರು 20 ಇಂಜಿನಿಯರ್‌ಗಳ ತಂಡ ರಚಿಸಿ ಜೆಜೆಎಂ ಕಾಮಗಾರಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಇತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts