More

    ಶುದ್ಧ ಕುಡಿಯುವ ನೀರಿಗೆ 3000 ಕೋಟಿ ರೂ. ಅನುದಾನ: ಬಿ.ವೈ.ರಾಘವೇಂದ್ರ

    ಶಿರಾಳಕೊಪ್ಪ: ಶಿವಮೊಗ್ಗ ಜಿಲ್ಲೆಯಲ್ಲಿ 3.95 ಲಕ್ಷ ಮನೆಗಳಿದ್ದು 95 ಸಾವಿರ ಮನೆಗಳಿಗೆ ಮಾತ್ರ ಈವರೆಗೆ ಕುಡಿಯುವ ಸಿಹಿ ನೀರು ದೊರಕಿದೆ. ಉಳಿದ 3 ಲಕ್ಷ ಮನೆಗಳಿಗೆ ಕುಡಿಯುವ ಶುದ್ಧ ಸಿಹಿ ನೀರಿನ ವ್ಯವಸ್ಥೆಗೆ 3 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಫೆ. 27ರಂದು ಪ್ರಧಾನಿ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದರು.
    ಪಟ್ಟಣದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ಶಿಕಾರಿಪುರ ಮಾಗರ್ವಾಗಿ ರಾಣೇಬೆನ್ನೂರು ಸೇರುವ 612 ಕೋಟಿ ರೂ. ವೆಚ್ಚದ ಮೊದಲ ಹಂತದ ರೈಲ್ವೇ ನಿರ್ಮಾಣ ಕಾಮಗಾರಿಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಿಲ್ಲೆಯಲ್ಲಿ ಸ್ವಾತಂತ್ರೃ ನಂತರ ಯಾವುದೇ ಹೊಸ ರೇಲ್ವೆ ಮಾಗರ್ ಆಗಿರಲಿಲ್ಲ. ಅದು ಈಗ ಸಾಕಾರಗೊಳ್ಳುತ್ತಿದೆ ಎಂದರು.
    ಶಿಕಾರಿಪುರ ತಾಲೂಕಿನ ಕೆರೆ ತುಂಬಿಸುವ ಯೋಜನೆಯಲ್ಲಿ ಕೆಲವು ಕೆರೆಗಳು ಕೈಬಿಟ್ಟು ಹೋಗಿದ್ದವು. ಅವುಗಳನ್ನು ಸೇರ್ಪಡೆ ಮಾಡುವ ಯೋಜನೆಗೆ 38 ಕೋಟಿ ರೂ. ನಿಗದಿಯಾಗಿದೆ. ಹಾಗೆಯೇ ಅಕ್ಕಮಹಾದೇವಿ ಕೋಟೆ ಅಭಿವೃದ್ಧಿ ಕಾರ್ಯ ಮುಕ್ತಾಯ ಹಂತದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸಿದ್ಧವಾಗಿದೆ. ಮುಖ್ಯಮಂತ್ರಿಗಳು ಡಿಪೋ ಉದ್ಘಾಟನೆ ವೇಳೆ 44 ಹೊಸ ಬಸ್‌ಗಳನ್ನು ತಾಲೂಕಿಗೆ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.
    22ರಿಂದ ಮನೆ ಮನೆಗೆ ಸಿಹಿ ವಿತರಣೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 80ನೇ ವಷರ್ದ ಜನ್ಮದಿನವನ್ನು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಬಿ.ವೈ. ರಾಘವೇಂದ್ರ ಹೇಳಿದರು. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಿರುವ ಧೀಮಂತ ನಾಯಕನ ಜನ್ಮದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಕುರಿತು ಎಲ್ಲರೂ ಪ್ರಯತ್ನಿಸೋಣ. ಜನ್ಮದಿನದ ಸವಿನೆನಪಿಗೆ ಫೆ.22ರಿಂದ ಪ್ರತಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ಗ್ರಾಮದ ಪ್ರತಿಯೊಂದು ಮನೆಗೆ ಈ ಹಿಂದೆ ಕರೊನಾ ಸಂದರ್ಭದಲ್ಲಿ ಅಕ್ಕಿ ವಿತರಿಸಿದಂತೆ ಪ್ರತಿಯೊಂದು ಮನೆಗೂ ಸಿಹಿ ಹಂಚಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts