More

    ಶೀಘ್ರವೇ ಪ್ಲಾಸ್ಮಾ ಥೆರಪಿ ಚಿಕಿತ್ಸೆ

    ಕಲಬುರಗಿ: ಕರೊನಾ ಸೋಂಕಿತರು ಬೇಗನೆ ಗುಣಮುಖರಾಗಲು ಸಹಾಯವಾಗುವ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ಶೀಘ್ರವೇ ಕಲಬುರಗಿಯಲ್ಲಿ ಆರಂಭಿಸಲಾಗುವುದು ಎಂದು ವೈದ್ಯರು ಆಗಿರುವ ಸಂಸದ ಡಾ.ಉಮೇಶ ಜಾಧವ್ ತಿಳಿಸಿದರು.
    ನಗರದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ ಕೋವಿಡ್ -19 ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರವನ್ನು ಉದ್ಘಾಟನೆ ಬಳಿಕ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
    ಈಗಾಗಲೇ ಬೆಂಗಳೂರು, ಹುಬ್ಬಳ್ಳಿ,ಬೆಳಗಾವಿ ಇನ್ನಿತರ ಕಡೆಗಳಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ. ಯಶಸ್ವಿ ಸಹ ಆಗಿದೆ.ಅದರಂತೆ ಕಲಬುರಗಿಯಲ್ಲಿಯೂ ಆರಂಭಗೊಳ್ಳಲಿದೆ. ಸಹಾಯವಾಣಿ ಮೂಲಕ ಬರುವ ಮಾಹಿತಿ, ದೂರುಗಳನ್ನು ಆಧರಿಸಿ ಕೋವಿಡ್ ರೋಗಿಗಳಿಗೆ ಐಸಿಯು, ವೆಂಟಿಲೇಟರ್ಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಡಾ.ಜಾಧವ್ ಹೇಳಿದರು.
    ಕರೊನಾವನ್ನು ಸೋಲಿಸುವ ಮೂಲಕ ನಾವೆಲ್ಲರೂ ಗೆಲ್ಲಬೇಕಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಅವರು ಬೆಡ್ ಕೊಟ್ಟಿರಬಹುದು, ನಾವು ಬ್ಲಡ್ ಕೊಟ್ಟಿದ್ದೇವೆ ಎಂಬುದು ಅರಿತು ಮಾತನಾಡಬೇಕು. ನಾವೇನು ಕೈಕಟ್ಟಿಕೊಂಡು ಕುಳಿತುಕೊಂಡಿಲ್ಲ. ವೈದ್ಯ ಸಮೂಹ ಮತ್ತು ಆರೋಗ್ಯ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೋ ಕುಳಿತುಕೊಂಡು ಟ್ವಿಟ್ ಮಾಡಿದರೆ, ಏನು ಆಗಲ್ಲ, ನಾವು ಬರಿ ಸಾಮಾಜಿಕ ಜಾಲ ತಾಣದಲ್ಲಿ ಹೇಳೋದು ಮಾಡುವರಲ್ಲ. ಖುದ್ದಾಗಿ ಜನರೊಂದಿಗೆ ಇದ್ದು ಅವರಿಗೆ ಭರವಸೆ ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದೇ ಅವರಿಗೂ ನಮಗೂ ಇರೋ ವ್ಯತ್ಯಾಸ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts