More

    ಶೀಘ್ರದಲ್ಲೇ ಮುರಗೋಡ ಗ್ರಾಪಂ ಮೇಲ್ದರ್ಜೆಗೆ

    ಮುರಗೋಡ: ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದಲ್ಲಿ ಅತಿ ದೊಡ್ಡ ಗ್ರಾಪಂ ಮುರಗೋಡ ಜನಸಂಖ್ಯೆ ಆಧಾರದ ಮೇಲೆ ಅತಿ ಶೀಘ್ರದಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಲಿದೆ. ಈ ಭಾಗದ ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ನಿರಂತರ ಶ್ರಮ ವಹಿಸುವೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

    ಸ್ಥಳೀಯ ಗ್ರಾಪಂ ಕಟ್ಟಡದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು. ಮುರಗೋಡದಲ್ಲಿ ಕೆರೆ, ರಸ್ತೆ, ಶಾಲಾ ಕೊಠಡಿಗಳು, ಮಲ್ಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಹೀಗೆ ಕೋಟ್ಯಂತರ ರೂ. ಹಣದಲ್ಲಿ ವಿವಿಧ ಕಾಮಗಾರಿ ಮಾಡಲಾಗಿದೆ. ಶಾಸಕರ ಅನುದಾನದಲ್ಲಿ ಗ್ರಾಪಂ ನೂತನ ಕಟ್ಟಡಕ್ಕೆ 20 ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ವೆಚ್ಚದಲ್ಲಿ ಹೈಟೆಕ್ ಗ್ರಾಪಂ ನಿರ್ಮಿಸಿದ್ದು, ಸದುಪಯೋಗ ಪಡೆಯಬೇಕು ಎಂದು ಹೇಳಿದರು.

    ಶ್ರೀ ಮಹಾಂತ ಮಠದ ನೀಲಕಂಠ ಶ್ರೀ, ಕೆಂಗೇರಿ ಚಿದಂಬರೇಶ್ವರ ಮಠದ ದಿವಾಕರ ದೀಕ್ಷಿತ್ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ಜನಪ್ರತಿನಿಧಿಗಳು ಸಮಾಜದ ಎರಡು ಕಣ್ಣುಗಳು ಇದ್ದಂತೆ. ಸಮಾಜ ಸೇವೆ ಮಾಡುವ ಜತೆಗೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು, ಮನುಷ್ಯನಿಗೆ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಹೋಮ-ಹವನ, ನವಗ್ರಹ ಪೂಜೆ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳು, ಶಾಸಕರು ನಾಮಫಲಕ, ಗ್ರಾಪಂ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದರು.

    ಗ್ರಾಪಂ ಅಧ್ಯಕ್ಷ ಸಂಗಪ್ಪ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಪತಹಸೀಲ್ದಾರ್ ಡಿ.ಬಿ.ಅಲಯ್ಯನವರಮಠ, ಮಡಿವಾಳಪ್ಪ ಶೆಟ್ಟರ್, ಶಂಕರಯ್ಯ ಮಲ್ಲಯ್ಯನವರಮಠ, ವಿ.ಬಿ. ದೇಸಾಯಿ, ಮಲ್ಲಿಕಾರ್ಜುನ ಸಿದ್ದನಗೌಡರ, ಮಲ್ಲಪ್ಪ ಕುರಬೇಟ, ಬಿ.ಎನ್. ಬ್ಯಾಳಿ, ತಾಲೂಕಾಧಿಕಾರಿ ರಮೇಶ ರಕ್ಕಸಗಿ, ಗ್ರಾಪಂ ಉಪಾಧ್ಯೆಕ್ಷೆ ಅತಿಯಾಬಾನು ಪಡೇಸೂರ, ಪಿಡಿಒ ಆರ್.ಎಲ್. ಬಾಗಿಲದ, ಕಾರ್ಯದರ್ಶಿ ಯು.ಬಿ. ಅಣ್ಣಿಗೇರಿ, ಕುಮಾರ ಪೂಜೇರಿ, ಗ್ರಾಪಂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts