More

    ಶಿಶು ಮರಣದ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಿ


    ಯಾದಗಿರಿ: ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳೂವಂತೆ ಜಿಪಂ ಸಿಇಒ ಗರೀಮಾ ಪನ್ವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಮಂಗಳವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಆಶಾ ಕಾರ್ಯಕತರ್ೆಯರು ಗ್ರಾಮಗಳಲ್ಲಿ ತಾಯಿ ಕಾರ್ಡ್ ನೋಂದಾಯಿಸಿ ಗಭರ್ಿಣಿಯರ ಹೆಸರು ಪಟ್ಟಿ ಮಾಡಿ ಕೊಡುತ್ತಾರೆ. ಅದರಂತೆ ಆರ್ಸಿಎಚ್ ಪೋರ್ಟಲ್ನಲ್ಲಿ ಅವರ ಹೆಸರು ನೋಂದಾಯಿಸಲು ಅಗತ್ಯ ಎಚ್ಚರಿಕೆ ವಹಿಸಬೇಕು. ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರ, ಯಲ್ಹೇರಿ, ಶ್ರೀನಿವಾಸಪುರ, ತಡಿಬಿಡಿ, ಮಲ್ಹಾರ, ಯರಗೋಳ, ಯಾದಗಿರಿ ಹಾಗೂ ಶಹಾಪುರದಲ್ಲಿ ಇವುಗಳ ಪ್ರಗತಿ ತುಂಬಾ ಕಡಿಮೆಯಾಗಿದೆ ಎಂದರು.

    ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ಶೇ.83ರಷ್ಟು ಮಕ್ಕಳಿಗೆ ಲಸಿಕೆ ಹಾಕಿಸಲಾಗಿದೆ. ಶೇ.100ರಷ್ಟು ಪ್ರಗತಿ ಸಾಧಿಸಬೇಕು. ಮಲ್ಹಾರ, ಕೌಳೂರ, ಕೊಂಕಲ್, ಗುತ್ತಿ ಬಸವೇಶ್ವರ,ನಗನೂರ, ಮಲ್ಲಾ (ಬಿ), ಹಾಗೂ ಸುರಪುರದಲ್ಲಿ ಈ ಕೆಲಸ ಕ್ಷಿಪ್ರಗತಿಯಲ್ಲಿ ಸಾಗಬೇಕು. ಪೂರ ಈ ಸಂಸ್ಥೆಗಳ ಪ್ರಗತಿಯು ಇನ್ನೂ ಹೆಚ್ಚಾಗಬೇಕು. ಕಡಿಮೆ ಪ್ರಗತಿ ಸಾಧಿಸಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಯಲ್ಲಿ ಏಪ್ರಿಲ್ನಿಂದ ನವೆಂಬರ ತಿಂಗಳಲ್ಲಿ 0-2 ವರ್ಷದ ವಯೋಮಿತಿಯಲ್ಲಿ ಒಟ್ಟು 168 ಶಿಶು ಮರಣ ಸಂಭವಿಸಿವೆ. ಇದು ಅತ್ಯಂತ ಗಂಭೀರ ವಿಷಯ. ಸುರಪೂರ ತಾಲೂಕಿನಲ್ಲಿ 85, ಯಾದಗಿರಿಯಲ್ಲಿ 61 ಹಾಗೂ ಶಹಾಪುರ ತಾಲೂಕಿನಲ್ಲಿ 22 ಶಿಶು ಮರಣವನ್ನಪ್ಪಿವೆ. ಎಲ್ಲ ಕೇಂದ್ರಗಳಲ್ಲಿ ಆಡಳಿತ ವೈದ್ಯಾಧಿಕಾರಿಗಳು ಈ ಗಂಡಾಂತರ ತಪ್ಪಿಸಲು ನಿಗದಿತ ಸಮಯದಲ್ಲಿ ಪರಿಕ್ಷೆಗೆ ಒಳಪಡಿಸಿ, ವೈದ್ಯಕೀಯ ಸೇವೆ ನೀಡಲು ಹಾಗೂ ನವಜಾತ ಶಿಶುಗಳ ಆರೋಗ್ಯ ಸೇವೆಯನ್ನು ಆಶಾ ಮುಖಾಂತರ ನೀಡಬೇಕೆಂದು ನಿರ್ದೇಶಿದರು.

    ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಮೊದಲ ಹಂತದಲ್ಲಿ ಆರ್ಬಿಎಸ್ಕೆ ತಂಡದ ಮುಖಾಂತರ 17-18 ವರ್ಷದ ಸಕರ್ಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಒಟ್ಟು 10787 ಮಕ್ಕಳ ಗುರಿ ಹೊಂದಿದ್ದು, ಇದರಲ್ಲಿ 10669 ಮಕ್ಕಳ ತಪಾಸಣೆ ಮಾಡಿ ಶೇ.98.91ರಷ್ಟು ಪ್ರಗತಿ ಸಾಧಿಸಿದ್ದು ಇದರಲ್ಲಿ 3374 ಮಕ್ಕಳಲ್ಲಿ ಸಾಧಾರಣ, 3333 ಮಕ್ಕಳಲ್ಲಿ ಮಧ್ಯಮ ಹಾಗೂ 296 ಮಕ್ಕಳಲ್ಲಿ ತೀವ್ರ ಅನೀಮಿಯಾ ಸಮಸ್ಯೆ ಕಂಡು ಬಂದಿದ್ದು, ಮಕ್ಕಳಿಗೆ ವೈದ್ಯಕೀಯ ಸೇವೆ ನೀಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts