More

    ಶಿಳ್ಳೆ ಗುಡ್ಡದ ಮೇಲೆ ಆಸ್ಪತ್ರೆ ನಿರ್ವಿುಸಿ

    ಕುಮಟಾ: ತಾಲೂಕಿನ ದೀವಗಿ ಪಂಚಾಯಿತಿ ವ್ಯಾಪ್ತಿಯ ಶಿಳ್ಳೆ ಗುಡ್ಡದ ಮೇಲೆ ಅರಣ್ಯ ಇಲಾಖೆಗೆ ಸೇರಿದ ವ್ಯರ್ಥ ಕಲ್ಲರೆ ಭೂಮಿಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಬಳಸಿದರೆ ಉತ್ತಮ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ನೇತೃತ್ವದಲ್ಲಿ ಸಾರ್ವಜನಿಕರು ತಹಸೀಲ್ದಾರ್ ವಿವೇಕ ಶೇಣ್ವಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
    ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣದ ಕೂಗು ಬಲಗೊಂಡಿದೆ. ಈಗಾಗಲೇ ಅನೇಕ ಬಾರಿ ತಹಸೀಲ್ದಾರ್, ಜಿಲ್ಲಾಧಿಕಾರಿ, ಶಾಸಕರು, ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಸೂಕ್ತ ಸ್ಥಳಾವಕಾಶ ಲಭ್ಯವಿದೆ.
    ಕುಮಟಾ-ಶಿರಸಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ದಿವಗಿ ಗ್ರಾಪಂ ವ್ಯಾಪ್ತಿಯ ಅಂತ್ರವಳ್ಳಿ ಗ್ರಾಮದ ಶಿಳ್ಳೆ ಸರ್ವೆ ನಂಬರ್ 256, 286, 352ರಲ್ಲಿ ಸಾವಿರಾರು ಎಕರೆ ಅರಣ್ಯ ಇಲಾಖೆ ಜಾಗವಿದೆ. ಈ ಜಾಗದಲ್ಲಿ ಗಿಡಮರಗಳಿಲ್ಲ ಮತ್ತು ಕಲ್ಲರೆ ಭೂಮಿಯಾದ್ದರಿಂದ ಹಸಿರೀಕರಣ ಸಾಧ್ಯವೂ ಇಲ್ಲ. ಈ ಜಾಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಸೂಕ್ತವಾಗಿದ ಎಂದು ತಿಳಿಸಿದ್ದಾರೆ.
    ಮಿರ್ಜಾನ ಪಂಚಾಯಿತಿ ವ್ಯಾಪ್ತಿಯ ನಾಗೂರು ಗ್ರಾಮದಲ್ಲಿರುವ 50 ಎಕರೆ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಶಿಳ್ಳೆಯಲ್ಲಿರುವ ಅರಣ್ಯ ಇಲಾಖೆಯ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜಾಗ ಒದಗಿಸಿಕೊಡಬಹುದಾಗಿದೆ. ಈ ಬಗ್ಗೆ ಸೂಕ್ತ ಕ್ರಮವಾಗಬೇಕು ಈ ಮೂಲಕ ಜಿಲ್ಲೆಯ ಜನರ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಮನವಿ ಸ್ವೀಕರಿಸಿದ ತಹಸೀಲ್ದಾರ್ ವಿವೇಕ ಶೇಣ್ವಿ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಜಾಗದ ಮಾಹಿತಿಯೊಂದಿಗೆ ವರದಿ ನೀಡುವುದಾಗಿ ತಿಳಿಸಿದರು. ಅಳಕೋಡ ಗ್ರಾಪಂ ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯರಾದ ವಿನಾಯಕ ನಾಯ್ಕ, ದೇವು ಗೌಡ, ರಾಜೀವ ಭಟ್ಟ, ಮಹೇಶ ದೇಶಭಂಡಾರಿ, ನಯನಾ ಗೌಡ, ಹೊಲನಗದ್ದೆ ಗ್ರಾಪಂ ಸದಸ್ಯೆ ಅನುರಾಧ ಭಟ್ಟ, ಜಯಾ ಶೇಟ್, ಶ್ರೀಧರ ಗೌಡ, ಎಂ.ಎಸ್. ಹೆಗಡೆ, ತುಳಸು ಗೌಡ, ಕಾರ್ತಿಕ ಭಟ್, ಗಣಪತಿ ನಾಯ್ಕ, ವಿಷ್ಣು ಗೌಡ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts