More

    ಶಿರಹಟ್ಟಿ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ

    ಶಿರಹಟ್ಟಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಶಿರಹಟ್ಟಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕಾಮಗಾರಿಗಳು ಭೂಮಿ ಪೂಜೆಗೆ ಸೀಮಿತವಾಗಿವೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆರೋಪಿಸಿದರು.

    ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಯಡಿ ಯಾವೊಬ್ಬ ಫಲಾನುಭವಿಗೆ ಆಶ್ರಯ ಮನೆಗಳು ದೊರೆತಿಲ್ಲ. ನಾನು ಶಾಸಕನಾಗಿದ್ದಾಗ ಲಕ್ಷ್ಮೇಶ್ವರದಲ್ಲಿ 40, ಮುಂಡರಗಿಯಲ್ಲಿ 23, ಶಿರಹಟ್ಟಿಯಲ್ಲಿ 6 ಎಕರೆ ಜಮೀನು ಖರೀದಿಸಿ ಬಡವರಿಗೆ ನಿವೇಶನ ಹಂಚಿಕೆಗೆ ವ್ಯವಸ್ಥೆ ಮಾಡಲಾಗಿತ್ತು. 3,450 ಕೋಟಿ ರೂ. ವೆಚ್ಚದಲ್ಲಿ ಚೆಕ್​ಡ್ಯಾಂ, ಕೆರೆಗಳ ನಿರ್ವಣ, ಹೂಳೆತ್ತುವ ಕಾರ್ಯ ಮಾಡಿಸಲಾಗಿತ್ತು. ಜಾಲವಾಡಿ, ಇಟಗಿ-ಸಾಸಲವಾಡ, ಬಾಲೆಹೊಸೂರ ಏತ ನೀರಾವರಿ ಯೋಜನೆಗೆ ಅನುದಾನ ಪಡೆಯಲಾಗಿತ್ತು. ಆದರೆ, ಬದಲಾದ ಸರ್ಕಾರ, ಕ್ಷೇತ್ರದ ಶಾಸಕರು ಇಚ್ಛಾಶಕ್ತಿ ತೋರದ್ದರಿಂದ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ದೂರಿದರು.

    ನದಿ ಮೂಲಕ ಪ್ರತಿ ಹಳ್ಳಿಗೆ ಕುಡಿಯುವ ನೀರು ಪೂರೈಸಲು 1049 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸಿದ ಡಿಬಿಒಟಿ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕಗಳು ಕೆಟ್ಟು, ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಅನ್ನಭಾಗ್ಯ ಯೋಜನೆಗೆ ಕೊಕ್ಕೆ ಹಾಕಲಾಗಿದೆ. ಅಂಗವಿಕಲ, ವಿಧವಾ, ವೃದ್ಧಾಪ್ಯ ವೇತನಕ್ಕಾಗಿ ಫಲಾನುಭವಿಗಳು ತಹಸೀಲ್ದಾರ್ ಕಚೇರಿಗೆ ಅಲೆದಾಡುವಂತಾಗಿದೆ. ಕರೊನಾ ನಿಯಂತ್ರಣ ಹೆಸರಲ್ಲಿ ಸರ್ಕಾರ ಖಜಾನೆ ಲೂಟಿ ಮಾಡುತ್ತಿದೆ. ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ. ಕೋವಿಡ್ ಸೋಂಕಿತ ಬಡವರನ್ನು ಆಸ್ಪತ್ರೆಗಳಲ್ಲಿ ಅನಾದರದಿಂದ ಕಾಣಲಾಗುತ್ತಿದೆ. ಸಚಿವ ಸಿ.ಸಿ. ಪಾಟೀಲ ತಾಲೂಕಿನ ಕರೊನಾ ಚಿಕಿತ್ಸೆ ಕೇಂದ್ರಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿಲ್ಲ ಎಂದು ಆರೋಪಿಸಿದರು.

    ಜಾಲವಾಡಗಿ, ಇಟಸಿ-ಸಾಸಲವಾಡ ಏತ ನೀರಾವರಿ, ನದಿಗಳಿಂದ ಕೆರೆಗಳ ಭರ್ತಿ ಯೋಜನೆ ಜಾರಿಗೊಳಿಸದಿದ್ದರೆ ರೈತರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದರು.

    ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ, ನಗರ ಘಟಕಾಧ್ಯಕ್ಷ ಮಹಾಂತೇಶ ದಶಮನಿ, ಪಪಂ ಸದಸ್ಯ ಮಂಜುನಾಥ ಘಂಟಿ, ಯುವ ಘಟಕ ತಾಲೂಕಾಧ್ಯಕ್ಷ ವಿರೂಪಾಕ್ಷ ನಂದೆಣ್ಣವರ, ಬುಡನ್​ಶಾ ಮಕಾನದಾರ, ಮಾಬುಸಾಬ್ ಲಕ್ಷ್ಮೇಶ್ವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts