More

    ಶಿಕ್ಷೆ ಪ್ರಮಾಣ ಕುಂಠಿತಕ್ಕೆ ನ್ಯಾಯಮೂರ್ತಿ ಕಳವಳ

    ಚಿತ್ರದುರ್ಗ: ನ್ಯಾಯಾಂಗ ವ್ಯವಸ್ಥೆಗೆ ತನಿಖಾ ಸಂಸ್ಥೆಗಳ ದಕ್ಷ ಕಾರ‌್ಯವೈಖರಿಯೇ ಭದ್ರಾ ಬುನಾದಿ. ಪೊಲೀಸರು ಸಲ್ಲಿಸುವ ಸಾಕ್ಷಾೃಧಾರಗಳನ್ನಾಧರಿಸಿ ಯೇ ಅಪರಾಧಿಗೆ ಶಿಕ್ಷೆಯ ತೀರ್ಪು ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್‌ಸಿಂಗ್‌ಯೆರೂರ್ ಹೇಳಿದರು.
    ನ್ಯಾಯಾಂಗ,ಪೊಲೀಸ್ ಇಲಾಖೆಗಳು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಸಿಆರ್‌ಪಿಸಿ ಮತ್ತು ಎನ್‌ಡಿಪಿ ಎ ಸ್ ಕಾಯ್ದೆ ಕುರಿತು,ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಶನಿವಾರ,ಜಿಪಂದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಒಂದು ದಿನದ ಕಾರ‌್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಪೊಲೀಸರು ದಕ್ಷತೆಯಿಂದ ತನಿಖೆ ನಡೆಸಿದರೆ ನೊಂದವರಿಗೆ ನ್ಯಾಯ ಸಿಗುತ್ತದೆ. ಸ್ವಯಂ ಹೇಳಿಕೆಯೊಂದೇ ಶಿಕ್ಷೆಗೆ ಕಾರಣವಾಗಬಾರ ದು. ದೇಶದಲ್ಲಿಯ ಅಪರಾಧಗಳ ಸಂಖ್ಯೆಗೆ ಹೋಲಿಸಿದರೆ ಶಿಕ್ಷೆ ಪ್ರಮಾಣ ತೀರಾ ಕಡಿಮೆಯಾಗಿದೆ. ಸಿಆರ್‌ಪಿಸಿ,ಐಪಿಸಿ ಇತರೆ ಕಾಯ್ದೆಗಳಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಜಾರ್ಜ್‌ಶೀಟ್ ಸಲ್ಲಿಸದಿದ್ದರೆ, ಆರೋಪಿ ಖುಲಾಸೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ರು.
    ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ತನಿಖೆ ನಡೆಸ ಬೇಕಿದೆ. ತನಿಖೆ ಎಂಬುದು ರಾಕೆಟ್ ಸೈನ್ಸ್‌ಅಲ್ಲ, ಪೂ ರ್ವಗ್ರಹ,ಒತ್ತಡ,ಪಕ್ಷಪಾತಕ್ಕೆ ಒಳಗಾಗದೆ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸರು ಮಾಡ ಬೇಕಿದೆ.
    ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿರುವಂತೆ ಉತ್ತಮ ಸಂವಿಧಾನ,ಕಾನೂನುಗಳಿದ್ದರೂ,ಅನುಷ್ಠಾನ ಸರಿಯಾಗಿ ಆಗದಿದ್ದರೆ ಪ್ರ ಯೋಜನವಾಗದು. ತನಿಖೆಯಲ್ಲಿ ತಂತ್ರಜ್ಞಾನದ ಸಮರ್ಥ ಬಳಕೆಯಾಗ ಬೇಕಿದೆ. ದೇಶದೊಳಗಿರುವ ಶತ್ರಗಳನ್ನು ಪೊಲೀಸರು ಪತ್ತೆ ಮಾ ಡಬೇಕಾಗುತ್ತದೆ.
    ಯಾವುದೇ ಹಿಂಜರಿಕೆ ಇಲ್ಲದೆ ನೊಂದವರು ನ್ಯಾಯ ಅರಿಸಿ ಪೊಲೀಸ್‌ಠಾಣೆ,ನ್ಯಾಯಾಲಯಕ್ಕೆ ಬರುವಂತಾಗಬೇಕು. ಜನರೊಂದಿಗೆ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು. ಪ್ರಕರಣ ದಾಖಲಿ ಸುವಾಗ ಆರೋಪಿತರ ಮೂಲ ಹಕ್ಕುಗಳಿಗೆ ಧಕ್ಕೆ ಆಗಬಾರದು. ಭಗವಂತ ನ ಕೃಪೆ,ಶ್ರಮದಿಂದ ಪೊಲೀಸರಾಗಿದ್ದೀರಿ,ಆದರೆ ಉತ್ತಮವಾಗಿ ಕರ್ತವ್ಯ ನಿರ್ವಹಿಸದಿದ್ದರೆ ನಿಮಗಿರುವ ಅಧಿಕಾರದಿಂದ ಯಾರಿಗೆ ಏನೂ ನೆರವಾಗದು.
    ಒತ್ತಡಗಳಿಗೆ ಒಳಗಾಗದೆ ಕಾರ್ಯನಿರ್ವಹಿಸುತ್ತಿರುವುದಕ್ಕೆ ದೇಶದ ನ್ಯಾಯಾಂಗ ವ್ಯವಸ್ಥೆ ಹೆಸರುವಾಸಿಯಾಗಿದೆ. ಈ ಪರಂಪರೆ ಇನ್ನಷ್ಟು ಬಲವಾಗ ಬೇಕಿದೆ. ನ್ಯಾಯಾಧೀಶರ ತಾಳ್ಮೆಯ ಆಲಿಕೆ ವ್ಯವಸ್ಥೆ ಮೇಲಿನ ಭರವಸೆ ಹೆಚ್ಚಿಸುತ್ತದೆ. ಮಾಧ್ಯಮಗಳ ವರದಿಯನ್ನಾಧರಿಸಿ ನ್ಯಾಯಾಲಯಗಳು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿವೆ ಎಂದು ನ್ಯಾಯಮೂರ್ತಿ ಹೇಳಿದರು.
    ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಆರ್.ಸೋಮಶೇಖರ್ ಅವರು ಅಪರಾಧ ಪ್ರಕ್ರಿಯೆ ಸಂಹಿತೆ ಹಾಗೂ ಎನ್‌ಡಿಪಿಎಸ್ ಕಾಯ್ದೆ ಕು ರಿತು ಉಪನ್ಯಾಸ ನೀಡಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ,ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ,ಜಿಪಂ ಉಪಕಾರ‌್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಸೇರಿದಂತೆ ಮತ್ತಿತರರು ಇದ್ದ ರು.
    ಕ್ಲಬ್‌ಗಳ ಮೇಲೆ ದಾಳಿ
    ಪರವಾನಗಿ,ಕಾಯ್ದೆ,ನಿಯಮಗಳನ್ನು ಆಧರಿಸಿ ಕ್ಲಬ್,ಸಂಘ-ಸಂಸ್ಥೆಗಳ ಕಾರ‌್ಯನಿರ್ವಹಿಸುತ್ತಿವೆ ಎಂಬುದನ್ನು ಪೊಲೀಸರು ಪರಿಶೀಲಿಸಬ ಹುದು. ಆದರೆ ಈ ಪರಿಶೀಲನೆಯ ಉದ್ದೇಶ ಸ್ಪಷ್ಟವಾಗಿರಬೇಕು. ಕ್ಲಬ್,ಸಂಘ-ಸಂಸ್ಥೆಗಳಲ್ಲಿ ಸಿಸಿಟಿವಿ ಇತ್ಯಾದಿಗಳ ಅಳವಡಿಕೆಗೆ ನಿಯಮ ಗಳ ಪಾಲನೆಗಳೆಡೆ ಗಮನ ಹರಿಸಬೇಕೆಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts