More

    ಶಿಕ್ಷಣ ಹಬ್ ವಾಡಿಯಲ್ಲೇ ಪ್ರಥಮ

    ವಾಡಿ: ಮುರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ, ಡಾ.ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿ ಶಿಕ್ಷಣದ ಹಬ್ ಹಾಗೂ ನ್ಯೂ ಟೌನ್ ಒಂದೆಡೆ ನಿರ್ಮಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
    ಜಿಲ್ಲಾಡಳಿತ, ಸಮಾಜ ಕಲ್ಯಾಣ, ಲೋಕೋಪಯೋಗಿ, ಪೌರಾಡಳಿತ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಡಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡ ಚಿತ್ತಾಪುರ ಹಾಗೂ ವಾಡಿ ನ್ಯೂಟೌನ್ಶಿಪ್, ಶಿಕ್ಷಣ ಹಬ್ ಸೇರಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಆಂಧ್ರದಲ್ಲಿ ಎನ್ಟಿಆರ್ ಮೊದಲು ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ವಸತಿ ಶಾಲೆ ಪ್ರಾರಂಭಿಸಿದ್ದರು. ರಾಜ್ಯದಲ್ಲಿ ಎಚ್.ಡಿ. ದೇವೇಗೌಡ ಸಿಎಂ ಇದ್ದಾಗ ರಾಜ್ಯದಲ್ಲಿ 824 ಮುರಾರ್ಜಿ ವಸತಿ ಶಾಲೆ ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
    2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಹೆಣ್ಣು ಮಕ್ಕಳಿಗಾಗಿ 114 ಕಿತ್ತೂರ ಚೆನ್ನಮ್ಮ ವಸತಿ ಶಾಲೆ ಆರಂಭಿಸಿದರು. ರಾಜ್ಯದ 600 ವಿದ್ಯಾಥರ್ಿ ನಿಲಯಗಳಲ್ಲಿ ಹಿಂದುಳಿದ ವರ್ಗದ 3.71 ಲಕ್ಷ ವಿದ್ಯಾರ್ಥಿಗಳಿದ್ದು, ಶೇ.96 ತೇರ್ಗಡೆ ಆಗುತ್ತಿದ್ದಾರೆ. ಈಗಾಗಲೇ 1500 ಶಿಕ್ಷಕರ ನೇಮಕವಾಗಿದೆ. 900 ಮಕ್ಕಳಿಗೆ 650 ಶಿಕ್ಷಕರ ನೇಮಕ ಆಗಬೇಕಾಗಿದೆ. 2019ರ ಸೆ.16ರಂದು ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಶಿಕ್ಷಣದ ಜತೆಗೆ ಕೌಶಲ, ತಾಂತ್ರಿಕ ಅಭಿವೃದ್ಧಿಗೆ ಹಣ ನೀಡಲು ನಿರ್ಣಯಿಸಲಾಗಿದೆ ಎಂದರು.
    ಡಾ.ಅಂಬೇಡ್ಕರ್ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ರಾಜ್ಯಕ್ಕೆ ಐದು ವಸತಿ ಶಿಕ್ಷಣ ನಿಲಯಕ್ಕೆ 50 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
    ಶಾಸಕ ಪ್ರಿಯಾಂಕ್ ಖಗರ್ೆ ಮಾತನಾಡಿ, ಸಮಾಜ ಕಲ್ಯಾಣ ಎಂದರೆ ದೇಶದ ಕಟ್ಟಕಡೆ ವ್ಯಕ್ತಿಗೆ ಆರ್ಥಿಕ, ಶೈಕ್ಷಣಿಕ ಭದ್ರತೆ ಒದಗಿಸುವುದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜನಸಂಖ್ಯೆಗೆ ಅನುಗುಣ 30 ಸಾವಿರ ಕೋಟಿ ರೂ. ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಯಿತು. ರಾಜ್ಯದಲ್ಲಿ ಆಂಗ್ಲ ಮಾಧ್ಯಮದ 820 ವಸತಿನಿಲಯಗಳಿದ್ದು, 4.20 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಚಿತ್ತಾಪುರದಲ್ಲಿ ನಾಗಾವಿ ಕ್ಯಾಂಪಸ್ ಮಾಡಿದ್ದು, 150 ಕೋಟಿ ಅನುದಾನ ನೀಡಲಾಗಿದೆ ಎಂದರು.
    ಎಂಎಲ್ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ಬಿ.ಜಿ. ಪಾಟೀಲ್, ತಾಪಂ ಅಧ್ಯಕ್ಷ ಜಗನ್ನಾಥರೆಡ್ಡಿ ಪೊಲೀಸ್ ಪಾಟೀಲ್, ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೋಡ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ರಾಮ ಪ್ಯಾಟಿ, ಎಸ್ಪಿ ಯಡಾ ಮಾರ್ಟಿನ ಮಾರ್ಬನ್ಯಾಂಗ್, ವಸತಿ ಶಿಕ್ಷಣ ಸಂಘದ ಕಾರ್ಯನಿರ್ವಾಹಕ ನಿರ್ದೇ ಶಕ ಟಿ.ರಾಘವೇಂದ್ರ. ಜಿಪಂ ಇಒ ಡಾ.ರಾಜ.ಪಿ. ಡಿಸಿ ಶರತ್ ಬಿ., ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ದೊಡ್ಡಪ್ಪಗೌಡ ಪಾಟೀಲ್ ನರಬೋಳ, ಪ್ರಮುಖರಾದ ನೀಲಕಂಠ ಪಾಟೀಲ್, ಕಾಶೀನಾಥ ಧನ್ನಿ, ಮನೋಜ, ಶಿವಾನಂದ ಪಾಟೀಲ್, ಶಿವರುದ್ರಭೇಣಿ, ಮಹಿಮೂದ್ ಸಾಹೇಬ್, ಭೀಮಣ್ಣ ಸಾಲಿ, ವೀರಣ್ಣಗೌಡ ಪರಸರೆಡ್ಡಿ, ಶಿವುರೆಡ್ಡಿಗೌಡ ಸೋಮರೆಡ್ಡಿ, ಅಜೀಜ್ ಸೇಠ, ಶ್ರೀ ನಿವಾಸ ಸಗರ, ನಾಗೇಂದ್ರ ಬೊಮ್ಮನಳ್ಳಿ, ಸೂರ್ಯಕಾಂತ ರದ್ದೇವಾಡಿ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ ಇತರರಿದ್ದರು.
    ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಕೆ.ಎಚ್.ಸತೀಶ ಸ್ವಾಗತಿಸಿದರು. ರಾಜಶೇಖರ ಮಾಂಗ್ ನಿರೂಪಣೆ ಮಾಡಿದರು. ವಿಠ್ಠಲ್ ಹಾದಿಮನಿ ವಂದಿಸಿದರು. 

    ವಿವಿಧ ಕಾಮಗಾರಿಗಳಿಗೆ ಚಾಲನೆ
    ಚಿತ್ತಾಪುರ ಹಾಗೂ ವಾಡಿ ನ್ಯೂಟೌನಶಿಪ್, ಶಿಕ್ಷಣ ಹಬ್, ವಾಡಿ ನಗರೋತ್ಥಾನ-3 ಯೋಜನೆ ಅಡಿ ನೀರು ಸರಬರಾಜು ಕಾಮಗಾರಿ, ವಾಡಿಯ ವಾಡರ್್ 16ರಲ್ಲಿ ಸಮುದಾಯ ಭವನ, ಎಸ್ಎಫ್ಸಿ ಶೇ.24.1, ಶೇ.7.25, ಶೇ.5 ಅನುದಾನದಲ್ಲಿ ವಿವಿಧ ಸೌಲಭ್ಯ, ಪ್ರವಾಸಿ ಮಂದಿರ ನಿಮರ್ಾಣ ಹಾಗೂ ಚಿತ್ತಾಪುರನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮೂಲ ಸೌಕರ್ಯ, ಕ್ಯಾಂಪಸ್ ಅಭಿವೃದ್ಧಿ ಸೇರಿ 132.57 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

    ತೊಗರಿ ಬೆಂಬಲ ಬೆಲೆ ಹೆಚ್ಚಿಸಿ
    ಶಾಸಕ ಪ್ರಿಯಾಂಕ್ ಖರ್ಗೆ  ಅವರು ಕ್ವಿಂಟಾಲ್ ತೊಗರಿಗೆ 6100 ಬೆಂಬಲ ಬೆಲೆ ನೀಡುತ್ತಿದ್ದು, ಹೆಚ್ಚಿಸಬೇಕು. ತೊಗರಿ ಬಂಪರ್ ಬೆಳೆ ಬಂದಿದ್ದು, ಸರ್ಕಾ ರದಿಂದ ಪ್ರತಿ ರೈತರಿಂದ 10 ಕ್ವಿಂಟಾಲ್ ಖರೀದಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದರು.

    ಶಿಷ್ಟಾಚಾರ ಮುರಿದ ಮುಖಂಡರು
    ಕಾಮಗಾರಿಗಳ ಶಂಕುಸ್ಥಾಪನೆ ಸರ್ಕಾರಿ ಕಾರ್ಯಕ್ರಮವಾಗಿದ್ದು, ಶಿಷ್ಟಾಚಾರಕ್ಕೆ ಆದ್ಯತೆ ನೀಡಿ ಎಂದು ನಿರೂಪಕರು ಹೇಳುತ್ತಿದ್ದರೂ ಕಾಂಗ್ರೆಸ್, ಬಿಜೆಪಿ ಮುಖಂಡರು ವೇದಿಕೆ ಏರಿ ಶಿಷ್ಟಾಚಾರ ಉಲ್ಲಂಘಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ತಾಲೂಕು ಅಧ್ಯಕ್ಷ ನೀಲಕಂಠರಾವ ಪಾಟೀಲ್ ವೇದಿಕೆ ಏರಿದರೆ, ಕಾಂಗ್ರೆಸ್ ಪುರಸಭೆ ಸದಸ್ಯೆಯರ ಪರವಾಗಿ ಪತಿ, ತಾಯಿ ಪರವಾಗಿ ಮಗ, ಕೆಲವರು ಪತಿ, ಪತ್ನಿ ವೇದಿಕೆಯಲ್ಲಿ ಕುಳಿತಿರುವುದು ಆಯೋಜಕರು ಇರಿಸು-ಮುರುಸು ಆಗುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts