More

    ಶಿಕ್ಷಣ ದೇಶದ ಅಭಿವೃದ್ಧಿಗೆ ಬುನಾದಿ

    ಚಿತ್ರದುರ್ಗ: ವಿದ್ಯಾರ್ಥಿಗಳ ಹಾಜರಾತಿ ಕ್ಷೀಣಿಸುತ್ತಿರುವುದರಿಂದ ಸರ್ಕಾರಿ ಉರ್ದು ಶಾಲೆಗಳು ಕಣ್ಮರೆಯಾಗುತ್ತಿವೆ ಎಂದು ಡಯಟ್‌ನ ಹಿರಿಯ ಉಪನ್ಯಾಸಕ ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.

    ನಗರದ ಮುಸ್ಲಿಂ ಎಜುಕೇಷನಲ್ ಆ್ಯಂಡ್ ಎಂಪವರ್‌ಮೆಂಟ್ ಟ್ರಸ್ಟ್ ಉರ್ದು ಶಿಕ್ಷಕರಿಗೆ ಅಹಮದ್ ಪ್ಯಾಲೇಸ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಆದರೆ, ಶಿಕ್ಷಕರ ಸಂಖ್ಯೆ ಜಾಸ್ತಿ ಇದೆ. ಹಾಜರಾತಿ ಹೆಚ್ಚಳದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.

    ಪ್ರೈಮರಿ, ಸೆಕಂಡರಿ ಶಿಕ್ಷಣ ಪೂರೈಸಿ ಡಿಗ್ರಿಗೆ ಬರುವ ವೇಳಗೆ ಶೇ.30 ಮುಸ್ಲಿಂ ವಿದ್ಯಾರ್ಥಿಗಳು ಉಳಿಯುವಂತಾಗಿದೆ. ಬಡತನದ ಕಾರಣಕ್ಕೆ ಅನೇಕರು ಶಿಕ್ಷಣದಿಂದ ಹೊರಗುಳಿಯುವಂತಾಗಿದೆ ಎಂದು ತಿಳಿಸಿದರು.

    ಕುಟುಂಬ, ಗ್ರಾಮ, ರಾಜ್ಯ, ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿ ಆಗಿದ್ದು, ಆದ್ದರಿಂದ ಪಾಲಕರು, ಶಿಕ್ಷಕರು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕಿದೆ ಎಂದರು.

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತೇಶ್ ಮಾತನಾಡಿ, ಸಾಮಾಜಿಕ, ಆರ್ಥಿಕ ಸಮಸ್ಯೆ ನಿವಾರಣೆಗೆ ಶಿಕ್ಷಣವೊಂದೆ ಅಸ್ತ್ರವಾಗಿದ್ದು, ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಬೇಕಿದೆ ಎಂದ ಅವರು, ಶಿಕ್ಷಕಿ ಫಾತಿಮಾ ಶೇಖ್ ಸೇವೆ ಸ್ಮರಣೀಯ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಬಿಇಒ ಎಚ್.ಗಿರಿಜಾ ಮಾತನಾಡಿ, ಉರ್ದು ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾಷಾ ಶಿಕ್ಷಕರ ಅವಶ್ಯಕತೆ ಹಾಗೂ ಜವಾಬ್ದಾರಿ ಜಾಸ್ತಿಯಿದೆ. ನೀವು ಮಾಡುವ ಕೆಲಸದಿಂದ ನಿಮಗೆ ಆತ್ಮತೃಪ್ತಿ ಸಿಗಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.
    ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂಪತ್‌ಕುಮಾರ್, ಟ್ರಸ್ಟ್ ಅಧ್ಯಕ್ಷ ಸೈಯದ್ ಇಸಾಖ್ ಮಾತನಾಡಿದರು. ನಿವೃತ್ತ ಡಿವೈಎಸ್ಪಿಗಳಾದ ಅಬ್ದುಲ್ ರೆಹಮಾನ್, ಯೂಸೂಫ್, ನಿವೃತ್ತ ಪ್ರಾಚಾರ‌್ಯ ಮಹಮದ್ ಜಕಾವುಲ್ಲಾ, ಇಸಿಒ ಸಮೀರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts