More

    ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು


    ಯಾದಗಿರಿ: ಮುಂದಿನ ಐದು ವರ್ಷದ ಅವಯಲ್ಲಿ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ನಿರ್ಧರಿಸಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.

    ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಬುಧವಾರ ಆರ್ಡಿಡಿಎಫ್ ಯೋಜನೆಯಡಿ ನೂತನವಾಗಿ ನಿಮರ್ಿಸಲಾದ ಪಶು ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಕೆಕೆಆರ್ಡಿಬಿ ಸೇರಿ ಶಾಸಕರ ಅನುದಾನವನ್ನು ಸಂಪೂರ್ಣವಾಗಿ ಆರೋಗ್ಯ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಖಚರ್ು ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಜನತೆ ದೇವಸ್ಥಾನ, ಮಸೀದಿ, ಚಚರ್್ಗಳ ಅಭಿವೃದ್ಧಿಗೆ ಅನುದಾನ ಕೇಳಬೇಡಿ ಎಂದರು.

    ಹಳ್ಳಿಗಳಲ್ಲಿ ಸಿಸಿ ರಸ್ತೆ, ಚರಂಡಿ, ಸಕರ್ಾರಿ ಶಾಲೆಗಳಿಗೆ ಕೋಣೆ ನಿಮರ್ಾಣ ಹೀಗೆ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು. ಈ ಗ್ರಾಮದಲ್ಲಿ ಹೊಸ ಪಶು ಆಸ್ಪತ್ರೆ ನಿಮರ್ಿಸಬೇಕು ಎಂಬ ಜನರ ಬೇಡಿಕೆ ಇಂದು ಈಡೇರಿದೆ. ಹಳ್ಳಿಗಳಲ್ಲಿ ಜಾನುವಾರುಗಳ ರೈತರ ಬೆನ್ನೆಲುಬು ಇದ್ದಂತೆ. ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ ಎಂದು ಅಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ನಾನೂ ಸಹ ಈ ಬಗ್ಗೆ ಸಕರ್ಾರದ ಗಮನ ಸೆಳೆಯುವೆ ಎಂದು ಹೇಳಿದರು.

    ಪಶು ಇಲಾಖೆ ಸಹಾಯಕ ನಿದರ್ೇಶಕ ಡಾ.ಶರಣಭೂಪಾಲರಡ್ಡಿ, ಡಾ.ಶಶಿಕಿರಣ ಹಜಾರೆ, ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಶ್ರೀನಿವಾಸ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪ್ರಕಾಶ ನಿರೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts