More

    ಶಿಕ್ಷಕರು, ಪಾಲಕರ ಬಾಂಧವ್ಯ ಉತ್ತಮವಾಗಿರಲಿ

    ರಾವಂದೂರು: ಶಿಕ್ಷಕರು ಮತ್ತು ಪಾಲಕರ ಬಾಂಧವ್ಯ ಉತ್ತಮವಾಗಿದ್ದಾಗ ಶಾಲೆ ಪ್ರಗತಿಹೊಂದಲು ಸಾಧ್ಯ ಎಂದು ಡಿಡಿಪಿಐ ರಾಮಚಂದ್ರರಾಜೇಅರಸ್ ತಿಳಿಸಿದರು.


    ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ವಿಭಾಗಕ್ಕೆ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಕಲಿಕಾ ವಾತಾವರಣ ಪರಿಶೀಲಿಸಿ ಮಾತನಾಡಿದರು.


    ಶಿಕ್ಷಕರು ಪಾಲಕರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡಾಗ ಮಾತ್ರ ಶಾಲೆಯಲ್ಲಿ ಉತ್ತಮ ವಾತಾವರಣ ಇರುತ್ತವೆ. ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.


    ಜಿಲ್ಲಾದ್ಯಂತ ವಿಶೇಷ ಆಕರ್ಷಣಾ ಮತಗಟ್ಟೆಗಳಿಗೆ ಈ ಭಾರಿ ಚಿತ್ರಕಲಾ ಶಿಕ್ಷಕರನ್ನು ನಿಯೋಜಿಸಲಾಗಿದೆ. ಮತದಾರರು ಆಸಕ್ತಿಯಿಂದ ಬಂದು ಮತದಾನ ಮಾಡಲು ಪೂರಕವಾಗುವ ರೀತಿಯಲ್ಲಿ ಚಿತ್ರಗಳನ್ನು ಬಿಡಿಸುವ ಮೂಲಕ ಮತದಾರರ ಆಕರ್ಷಣೆ ಮಾಡಲು ಮತಗಟ್ಟೆಗಳು ಸಜ್ಜಾಗಿವೆ. ಮತದಾರರು ಮತದಾನದ ದಿನ ಯಾವುದೇ ಕೆಲಸ ಕಾರ್ಯಗಳ ಒತ್ತಡವಿದ್ದರೂ ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.


    ಚಿತ್ರಕಲಾ ಶಿಕ್ಷಕರಾದ ಸೋಮಣ್ಣ, ಪ್ರಕಾಶ್‌ಒಳಗುಂದಿ ಹಾಗೂ ದಸರಾ ಆನೆಗಳ ಚಿತ್ರಕಲಾಗಾರ ನಾಗಲಿಂಗಪ್ಪ ಬಡಿಗಾರ್, ಶಿಕ್ಷಕಿ ಶೀಲಾಮಣಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts