More

    ಶಾಸಕರಿಂದ ದ್ವೇಷದ ರಾಜಕಾರಣ

    ಸೊರಬ: ಜನತೆ ಬವಣೆ ಅರಿತು ಶಾಸಕ ಕುಮಾರ್ ಬಂಗಾರಪ್ಪ ವೈಯುಕ್ತಿಕ ಉಪಕಾರ ಮಾಡುವುದಿಲ್ಲ, ಮಾಡುವವರಿಗೂ ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜು ಎಂ.ತಲ್ಲೂರು ಆರೋಪಿಸಿದರು.

    ಕ್ಷೇತ್ರದ ಶಾಸಕರು ಲಾಕ್​ಡೌನ್ ಸಂದರ್ಭದಲ್ಲಿ ಕೇವಲ ಸರ್ಕಾರಿ ಸಭೆಗಳಿಗೆ ಮಾತ್ರ ಭಾಗವಹಿಸಿದ್ದಾರೆ ಹೊರತು ತಾಲೂಕಿನ ಜನತೆ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿಯಲು ಹೋಗಿಲ್ಲ. ಹಳೇ ಸೊರಬದಲ್ಲಿ ಕರೊನಾ ಸೋಂಕು ತಗುಲಿದ್ದರಿಂದ 12 ದಿನಗಳಿಂದ ಇಲ್ಲಿನ ಜನತೆ ಸಂಕಷ್ಟಕ್ಕೀಡಾಗಿದ್ದರೂ ಶಾಸಕರು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಪಟ್ಟಣದ ಸರ್ವೆ ನಂ.113 ರ ವಿಷಯವನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಮೇಲೆ ದರ್ಪ ತೋರಿಸಿ ಸಭೆ ನಡೆಸಲು ಮುಂದಾಗಿದ್ದಾರೆ. ನಾನು ಚುನಾವಣೆಯಲ್ಲಿ ಸೋತರೂ ಜನತೆ ಬವಣೆ ಅರಿತು ಸೀಲ್​ಡೌನ್ ಆಗಿರುವ ಹಳೇಸೊರಬ ಗ್ರಾಮದಲ್ಲಿ ನಗದು ಸಹಾಯ ಮಾಡಲು ಹೋದಾಗ ನನ್ನನ್ನು ತಾಲೂಕು ಆಡಳಿತ ಮತ್ತು ಪೊಲೀಸರ ಮೂಲಕ ತಡೆದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

    ಆದರೂ ಸೀಲ್​ಡೌನ್ ಆದ ಹಳೇಸೊರಬ ಗ್ರಾಮದ ಪ್ರತಿ ಕುಟುಂಬಸ್ಥರಿಗೆ ಅವರ ಬ್ಯಾಂಕ್ ಖಾತೆ ಮೂಲಕ ತಲಾ 500 ರೂ. ಧನಸಹಾಯ ನೀಡಲಾಗುವುದು. ಕಂದಾಯ ಇಲಾಖೆ ಮಾಹಿತಿ ಇಲ್ಲದ ಕುಮಾರ್ ಬಂಗಾರಪ್ಪ ನೀರಾವರಿಗೆ ಸಂಬಂಧಿಸಿದ ದೊಡ್ಡ ಮೊತ್ತದ ಅನುದಾನದ ಬಗ್ಗೆ ಯಾರೊಬ್ಬರೂ ಪ್ರಶ್ನಿಸಬಾರದೆಂಬ ರೀತಿಯಲ್ಲಿ ವರ್ತಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಲಾಕ್​ಡೌನ್ ವೇಳೆ ಬೆಂಗಳೂರಿನಲಿದ್ದು ಕ್ಷೇತ್ರದ ಕೂಲಿಕಾರ್ವಿುಕರು, ಬಡವರಿಗೆ ಪಡಿತರ ಕಿಟ್ ವಿತರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದಾರೆ. ಮೊದಲು ಇವರು ವೈಯುಕ್ತಿವಾಗಿ ಕ್ಷೇತ್ರದ ಜನತೆಗೆ ಅಕ್ಕಿ, ಪಡಿತರ ವಿತರಣೆ ಮಾಡಿದ ಪಟ್ಟಿಯನ್ನು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಕಲ್ಲಪ್ಪ, ಕೆರಿಯಪ್ಪ, ಸುಬ್ರಹ್ಮಣ್ಯ, ಶ್ರೀಧರ, ಹುಚ್ಚರಾಯಪ್ಪ ಕುಂದಗಸ್ವಿ, ಇರ್ಫಾನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts