More

    ಶಾಶ್ವತ ಕುಡಿಯುವ ನೀರು ಯೋಜನೆಯ ಗುರಿ

    ಆಲಮೇಲ: ಪಟ್ಟಣದ ಇಂಡಿ ರಸ್ತೆ ಹತ್ತಿರದ ಅಂದಾಜು 54 ಎಕರೆಯ ವಿಶಾಲವಾದ ಕೆರೆಗೆ ಶಾಸಕ ಅಶೋಕ ಮನಗೂಳಿ ಹಾಗೂ ತಹಸೀಲ್ದಾರ್ ಸುರೇಶ ಚಾವಲರ್, ಡಿಓಡಿಸಿ ಎಡಬ್ಲುೃ ಜಗದೀಶ ನಾರಾಣಕರ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ ಹಾಗೂ ಇತರ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಅವರು ಮಾತನಾಡಿ, ಸಿಂದಗಿ ಪಟ್ಟಣದಲ್ಲಿ ಇರುವ ಕೆರೆಗಿಂತ ವಿಶಾಲವಾಗಿ ಇರುವ ಆಲಮೇಲ ಕೆರೆಯನ್ನು ಕೂಡಲೇ ಅಭಿವೃದ್ಧಿಗೊಳಿಸಿ ತಡೆಗೋಡೆ ನಿರ್ಮಿಸಬೇಕು. ಪ್ರವಾಸಿ ತಾಣ ಮಾಡುವುದರ ಜತೆಗೆ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀರ್ಘದಲ್ಲೇ ಕೆರೆಯ ಜೀರ್ಣೋದಾರ ಕಾರ್ಯ ಕೈಗೊಳ್ಳಲಾಗುವುದು. ಇದರಿಂದ ಬೇಸಿಗೆಯ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಈ ಭಾಗದಲ್ಲಿ ಕುಡಿಯುವ ನೀರು ಹಾಗೂ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ತಪ್ಪಿಸಿದಂತಾಗುತ್ತದೆ. ಬಹಳ ದಿನಗಳಿಂದ ನನೆಗುದಿ ಬಿದ್ದಂತಹ ಪಟ್ಟಣದ ದೇವರ ಅಗಸಿ ಕಾರ್ಯ ಕೂಡಲೇ ಪ್ರಾರಂಭಿಸಿ ಪೂರ್ಣಗೊಳಿಸಲಾಗುವುದು ಎಂದರು.

    ಇದೇ ವೇಳೆ ಕೆಲವು ವಿದ್ಯಾರ್ಥಿಗಳು ಪಟ್ಟಣದಲ್ಲಿ ಮುಚ್ಚಿಕೊಂಡಿರುವ ಗ್ರಂಥಾಲಯವನ್ನು ಪ್ರಾರಂಭಿಸಿ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು. ಇದಕ್ಕೆ ಶಾಸಕ ಅಶೋಕ ಮನಗೂಳಿ ಕೂಡಲೇ ಪಟ್ಟಣದ ಹಳೇಯ ಗ್ರಂಥಾಲಯಕ್ಕೆ ಅವಶ್ಯಕತೆ ಇರುವಂತಹ ಸಾಮಗ್ರಿ ಹಾಗೂ ಸಿಬ್ಬಂದಿ ಒದಗಿಸಿ, ಓದುಗರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

    ಸಚಿನ ಮೋರಟಗಿ, ಪಪಂ ಸದಸ್ಯರಾದ ಅಶೋಕ ಕೊಳ್ಳಾರಿ, ಭಾಗ್ಯವಂತ ಆಲಮೇಲಕರ, ಸಂತೋಷ ಜರಕರ, ದಯಾನಂದ ನಾರಾಯಣಕರ, ಮಲ್ಲು ಅಚಲೇರಿ, ಯಲ್ಲಪ್ಪ ಬುರುಡ, ಮುಖಂಡರಾದ ಅಪ್ಪುಗೌಡ ಪಾಟೀಲ (ಹೂವಿನಹಳ್ಳಿ), ಶಶಿಧರ ಗಣಿಹಾರ, ಪುಂಡಲೀಕ ದೊಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts